ತೆಲಂಗಾಣ : ಕಳೆದ ಎರಡು ದಿನಗಳ ಹಿಂದೆ ಕನ್ನಡದ ಖ್ಯಾತ ನಟಿ ರಶ್ಮಿಕ ಮಂದಣ್ಣ ಜೊತೆಗೆ ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ನಿಶ್ಚಿತಾರ್ಥ ನೆರವೇರಿತ್ತು. ಇದರ ಬೆನ್ನಲ್ಲೇ ಇದೀಗ ವಿಜಯ್ ದೇವರಕೊಂಡ ಚಲಿಸುತ್ತೀದ್ದ ಕಾರು ಅಪಘಾತವಾಗಿದೆ.
ಹೌದು ಪುಟ್ಟಪರ್ತಿಯಿಂದ ಹೈದರಾಬಾದ್ ಗೆ ಹೋಗುವಾಗ ಈ ಒಂದು ಅಪಘಾತ ಸಂಭವಿಸಿದ್ದು, ಮುಂದೆ ಹೋಗುತ್ತಿದ್ದ ಬೊಲೆರೋ ವಾಹನಕ್ಕೆ ವಿಜಯ್ ದೇವರಕೊಂಡ ಕಾರು ಡಿಕ್ಕಿ ಹೊಡೆದಿದೆ. ಮತ್ತೊಂದು ಕಾರಿನಲ್ಲಿ ದೇವರಕೊಂಡ ಹೈದರಾಬಾದ್ ಗೆ ತೆರಳಿದ್ದಾರೆ. ಸದ್ಯಕ್ಕೆ ಪ್ರಾಣಾಪಯದಿಂದ ವಿಜಯ ದೇವರಕೊಂಡ ಪಾರಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಅಷ್ಟೇ ರಶ್ಮಿಕ ಮಂದನ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ವಿಜಯ್ ದೇವರಕೊಂಡ ಫೆಬ್ರುವರಿಯಲ್ಲಿ ಈ ಜೋಡಿ ಹಸೆಮಣೆ ಏರಲಿದೆ ಎಂದು ತಿಳಿದು ಬಂದಿದೆ.
#News : #VijayDeveraKonda Met with a car accident near undavalli, gadwal district
He's safe and fine pic.twitter.com/Xyr8kMsqsr
— IndiaGlitz Telugu™ (@igtelugu) October 6, 2025