ಬೆಂಗಳೂರು : ಬೆಂಗಳೂರಿನಲ್ಲಿ ನಿವೃತ್ತ ಪೊಲೀಸ ಅಧಿಕಾರಿ ಕೈಯಲ್ಲಿ ಗನ್ ಹಿಡಿದು ರಂಪಾಟ ನಡೆಸಿರುವ ಘಟನೆ ನಡೆದಿದೆ. ಅದು ಅಲ್ಲದೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ನಿವಾಸದ ಪಕ್ಕದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಅವರು ಕೈಯಲ್ಲಿ ಹಿಡಿದು ರಂಪಾಟ ನಡೆಸಿದ್ದಾರೆ.
ಸಚಿವರ ಮನೆಯ ಬಳಿ ನಿತೇಶ್ ಅಪಾರ್ಟ್ಮೆಂಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಲಾರಿಯೊಂದು ಗ್ರಾನೈಟ್ಗಳನ್ನು ಹೊತ್ತು ತಂದಿದೆ. ಈ ವೇಳೆ ಮನೆ ಮುಂದೆ ಕಾರುಗಳು ಸಾಲಾಗಿ ನಿಂತಿದ್ದಕ್ಕೆ ಲಾರಿ ನಿಧಾನವಾಗಿ ಹೊರಟಿತ್ತು. ಈ ವೇಳೆ ಏಕಾಏಕಿ ಮನೆಯಿಂದ ಹೊರಗಡೆ ಬಂದ ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಅವರು ಕೈಯಲ್ಲಿ ಗನ್ ಹಿಡಿದು ಅವಾಜ್ ಹಾಕಿದ್ದಾರೆ.
ಗನ್ ತೋರಿಸಿ ಲಾರಿ ಚಾಲಕನಿಗೆ ಅವಾಜ್ ಹಾಕಿದ್ದಾರೆ. ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಇಲ್ಲಿಂದ ಹೋಗು ಎಂತ ಹೇಳಿದಾಗ, ಗ್ರಾನೆಟ್ ಅನ್ಲೋಡ್ ಮಾಡಬೇಕು ಸರ್ ಎಂದು ಕಟ್ಟಡ ಕಾರ್ಮಿಕರು ತಿಳಿಸಿದ್ದಾರೆ. ಅವರಿಗೂ ಸಹ ಜಯಪ್ರಕಾಶ್ ಗನ್ ತೋರಿಸಿ ಬೇದರಿಸಿದ್ದಾರೆ. ಅಲ್ಲದೆ ಬಿಡಿಸಲು ಬಂದ ತಮ್ಮ ಕುಟುಂಬಸ್ಥರ ವಿರುದ್ಧವು ಜಯಪ್ರಕಾಶ್ ಸಿಟ್ಟಾಗಿದ್ದಾರೆ.ನಿವೃತ್ತ ಪೊಲೀಸ್ ಅಧಿಕಾರಿಯ ವರ್ತನೆ ಕಂಡು ದಾರಿಹೋಕರು ಗಾಬರಿಗೆ ಒಳಗಾಗಿದ್ದಾರೆ.