ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಿವಾಸದಲ್ಲಿ ಕರ್ನಾಟಕದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕರಾದಂತಹ ಓಂ ಪ್ರಕಾಶ್ (68) ಅವರನ್ನು ಪತ್ನಿ ಪಲ್ಲವಿಯೆ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಇದೀಗ ಸಹೋದರಿಯರಿಗೆ ಆಸ್ತಿ ಮಾಡಿದ್ದಕ್ಕೆ ಈ ಒಂದು ಕೊಲೆಗೆ ಮೂಲ ಕಾರಣ ಎಂಬುದಾಗಿ ತಿಳಿದು ಬಂದಿದೆ.
ಹೌದು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಿವಾಸದಲ್ಲಿ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರನ್ನು ಅವರ ಪತ್ನಿ ಪಲ್ಲವಿ ಅವರೇ ಬರ್ಬರವಾಗಿ ಕೊಲೆ ಮಾಡಿದ್ದಾರೆ ದಾಂಡೇಲಿಯಲ್ಲಿದ್ದ ಆಸ್ತಿ ವಿಚಾರವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಓಂ ಪ್ರಕಾಶ್ ಅವರು ತಂಗಿಯವರ ಹೆಸರಿಗೆ ಆಸ್ತಿಯನ್ನು ಮಾಡಿದ್ದರು. ಇದೇ ವಿಚಾರವಾಗಿ ಹಲವು ದಿನಗಳಿಂದ ಪಲ್ಲವಿ ಹಾಗೂ ಓಂ ಪ್ರಕಾಶ್ ನಡುವೆ ಗಲಾಟೆ ನಡೆಯುತ್ತಿತ್ತು. ಈ ಬಗ್ಗೆ ಮಾತನಾಡಬೇಡ ಎಂದು ಓಂ ಪ್ರಕಾಶ್ ಅವರು ಪತ್ನಿ ಪಲ್ಲವಿ ಅವರಿಗೆ ವಾರ್ನಿಂಗ್ ಸಹ ಮಾಡಿದ್ದರು.
ಕೊಲೆಗೈದ ಬಳಿಕ ಪತ್ನಿ ಪಲ್ಲವಿ ಅವರೇ ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರಿಗೆ ಕರೆ ಮಾಡಿ ಕೊಲೆಯ ಬಗ್ಗೆ ಪಲ್ಲವಿ ಮಾಹಿತಿ ನೀಡಿದ್ದಾರೆ. ಓಂ ಪ್ರಕಾಶ್ ಅವರನ್ನು ಕೊಲೆಗೈದು ಪತ್ನಿ ಪಲ್ಲವಿ ಮುಖಕ್ಕೆ ಬಟ್ಟೆ ಕಟ್ಟಿದ್ದರು. 3 ಮಹಡಿಯ ಮನೆಯಲ್ಲಿ ಓಂ ಪ್ರಕಾಶ್ ಕುಟುಂಬ ವಾಸವಿತ್ತು. ಕೆಳ ಮಹಡಿಯಲ್ಲಿ ಪತ್ನಿ ಪಲ್ಲವಿ ಓಂ ಪ್ರಕಾಶ್ ಅವರನ್ನು ಕೊಲೆ ಮಾಡಿದ್ದಾರೆ.ಈ ವೇಳೆ ಮನೆಯಲ್ಲಿ ಸುಮಾರು ಐದಾರು ಜನರು 0ಇದ್ದರು ಎನ್ನಲಾಗುತ್ತಿದ್ದು ಓಂ ಪ್ರಕಾಶ್ ಅವರ ಸೊಸೆ ಕೂಡ ಕೊಲೆ ನಡೆಯುವ ವೇಳೆ ಮನೆಯಲ್ಲಿ ಇದ್ದರೂ ಎನ್ನಲಾಗುತ್ತಿದೆ.