ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಬಿವಿಎಂಪಿ ನಿವೃತ್ತ ನೌಕರ ಪರಮೇಶ್ವರಯ್ಯ (63) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರಿನ ಕೋರಮಂಗಲದ ಮನೆಯಲ್ಲಿ ಈ ಒಂದು ಆತ್ಮಹತ್ಯೆ ಘಟನೆ ನಡೆದಿದೆ. ಬಿಬಿಎಂಪಿ ನಿವೃತ್ತ ನೌಕರ ಪರಮೇಶ್ವರಯ್ಯ ಅವರು ಮಾನಸಿಕವಾಗಿ ಕುಗ್ಗಿಹೋಗಿದ್ದು ಹಾಗೂ ಚಿಕಿತ್ಸೆ ಸಹ ಪಡೆಯುತ್ತಿದ್ದರು. ಕೋರಮಂಗಲ ಠಾಣೆಯಲ್ಲಿ ಈ ಕುರಿತು ಯುಡಿಆರ್ ಪ್ರಕರಣ ದಾಖಲಾಗಿದೆ.








