ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಬೆನ್ನು ನೋವಿನ ಸಮಸ್ಯೆ ತಿಳಿಸಿ ನಟ ದರ್ಶನವರು ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಆದರೆ 5 ವಾರ ಕಳೆದರೂ ಕೂಡ ಇದುವರೆಗೂ ದರ್ಶನ್ ಸರ್ಜರಿ ಮಾಡಿಸಿಲ್ಲ. ಹಾಗಾಗಿ ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಅವರ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.
ಹೌದು, ಇಂದು ಹೈ ಕೋರ್ಟ್ ನಲ್ಲಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸರ್ಜರಿ ಕಾರಣ ನೀಡಿ ದರ್ಶನ್ ಅವರು ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಆದರೆ 5 ವಾರಗಳು ಕಳೆದರೂ ಕೂಡ ನಟ ದರ್ಶನವರು ಶಸ್ತ್ರಚಿಕಿತ್ಸೆ ಇದುವರೆಗೂ ಮಾಡಿಸಿಲ್ಲ. ಡಿಸೆಂಬರ್ 11ಕ್ಕೆ ಅವರ ಮಧ್ಯಂತರ ಜಾಮೀನು ಅವಧಿ ಅಂತ್ಯವಾಗಲಿದೆ. ಹಾಗಾಗಿ ಮಧ್ಯಂತರ ಜಾಮೀನು ವಿಸ್ತರಣೆಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ವಿಚಾರಣೆಯ ವೇಳೆ ನಟ ದರ್ಶನ್ ಪರ ಹಿರಿಯ ವಕೀಲರಾದಂತಹ ಸಿವಿ ನಾಗೇಶ್ ಅವರು, ಸುಧೀರ್ಘವಾದ ಅಂತಹ ವಾದ ಮಂಡನೆ ಮಾಡಿದ್ದರು. ಬಳಿಕ ಸರ್ಕಾರದ ಪರ ಎಸ್ ಪಿ ಪಿ ಪ್ರಸನ್ನ ಕುಮಾರ್ ಅವರು ಸಹ ದರ್ಶನ್ಪುರ ವಕೀಲರಿಗೆ ಕೌಂಟರ್ ನೀಡುವಂತಹ ವಾದ ಮಂಡನೆ ಮಾಡಿದ್ದರು. ಈ ಹಿನ್ನಲೆಯಲ್ಲಿ ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ಕೊನೆ ಹಂತ ತಲುಪಿದ್ದು, ಇಂದು ಅವರ ಜಾಮೀನಿನ ಭವಿಷ್ಯ ನಿರ್ಧಾರವಾಗಲಿದೆ.