ಕೊಪ್ಪಳ : ಕೊಪ್ಪಳದಲ್ಲಿ ಬಲ್ಡೊಟಾ ಕಾರ್ಖಾನೆ ವಿಚಾರವಾಗಿ, ಗವಿಸಿದ್ದೇಶ್ವರ ಸ್ವಾಮೀಜಿ ಮೌನ ಅನುಷ್ಠಾನಕ್ಕೆ ಜಾರಿದ್ದಾರೆ. ವಾರದಲ್ಲಿ 6 ದಿನಗಳ ಕಾಲ ಗವಿ ಸಿದ್ದೇಶ್ವರ ಸ್ವಾಮೀಜಿಗಳು ಮೌನ ಅನುಷ್ಠಾನಕ್ಕೆ ಜಾರಿದ್ದಾರೆ.
ಹೌದು ಬಲ್ಡೊಟಾ ಕಾರ್ಖಾನೆ ವಿಚಾರವಾಗಿ, ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯ ಎಲ್ಲ ಜನರೊಂದಿಗೆ ಪ್ರತಿಭಟನೆ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ವಾರದಲ್ಲಿ 6 ದಿನಗಳ ಕಾಲ ಗವಿ ಸಿದ್ದೇಶ್ವರ ಸ್ವಾಮೀಜಿಗಳು ಮೌನ ಅನುಷ್ಠಾನಕ್ಕೆ ಜಾರಿದ್ದಾರೆ. ಸೋಮವಾರ ಮಾತ್ರ ಭಕ್ತರಿಗೆ ದರ್ಶನ ನೀಡಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಕಾರ್ಖಾನೆ ರದ್ಧತಿ ಆದೇಶ ತರಬೇಕು ಎಂದಿದ್ದರು.
ಫೆಬ್ರವರಿ ನಡೆದ ಹೋರಾಟದ ವೇಳೆ ಶ್ರೀಗಳು ಹೇಳಿದ್ದರು. ಬೃಹತ್ ಹೋರಾಟ ನಡೆಸಿದರು, ಕಾರ್ಖಾನೆ ನಿಲ್ಲುವ ಲಕ್ಷಣ ಕಾಣುತಿಲ್ಲ. ಬಲ್ಡೊಟಾ ಕಾರ್ಖಾನೆಯಾದರೆ ಕೊಪ್ಪಳ ತೊರೆಯುವೆ ಎಂದು ಹೇಳಿದ್ದರು. ಇದೀಗ ಸ್ವಾಮೀಜಿಗಳು ಮೌನ ಅನುಷ್ಠಾನಕ್ಕೆ ಜಾರಿದ ಹಿನ್ನೆಲೆ ಭಕ್ತರಲ್ಲಿ ಆತಂಕ ಹೆಚ್ಚಿದೆ. ಯಾವಾಗಲು ಮಂಗಳವಾರ ಮಾತ್ರ ಮೌನ ಅನುಷ್ಠಾನ ಕೈಗೊಳ್ಳುತ್ತಿದ್ದರು. ಇದೀಗ ವಾರದಲ್ಲಿ 6 ದಿನ ಸ್ವಾಮೀಜಿಗಳು ಮೌನ ಅನುಷ್ಠಾನಕ್ಕೆ ಜಾರಿದ ಹಿನ್ನೆಲೆ ಭಕ್ತರಲ್ಲಿ ಆತಂಕ ಹೆಚ್ಚಿದೆ.