ಕೊಪ್ಪಳ : ಕಳೆದ 17 ವರ್ಷಗಳಿಂದ ನಿರಂತರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ನಿರಾಸೆ ಅನುಭವಿಸುತ್ತಾ ಬಂದಿದ್ದಾರೆ. ಆದರೂ ಸಹ ತಂಡದ ಮೇಲಿನ ಪ್ರೀತಿ, ಗೌರವ ಹಾಗು ಅಭಿಮಾನ ಯಾವತ್ತಿಗೂ ಕಡಿಮೆಯಾಗಿಲ್ಲ. ನಿನ್ನೆ ನಡೆದ ಪಂಜಾಬಿ ವಿರುದ್ಧ ಪಂದ್ಯದಲ್ಲಿ ಆರ್ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿದೆ. ನಿನ್ನೆ ಆರ್ಸಿಬಿ ಗೆದ್ದಿದ್ದೇ ತಡ ಇಡೀ ರಾಜ್ಯಾದ್ಯಂತ ಹಬ್ಬಗಳಂತೆ ಆರ್ಸಿಬಿ ಗೆಲುವನ್ನು ಸಂಭ್ರಮಿಸುತಿದ್ದಾರೆ.
ಇದೀಗ ಮದುವೆ ಮಂಟಪದಲ್ಲಿ ಕೂಡ ನವ ಜೋಡಿ RCB ಗೆಲುವನ್ನು ಸಂಭ್ರಮಿಸಿದ್ದಾರೆ. ಹೌದು ಕೊಪ್ಪಳದ ಕಾರಟಗಿ ಮರ್ಲಾನಹಳ್ಳಿಯಲ್ಲಿ ಆರ್ಸಿಬಿ ಗೆಲುವು ಸಂಭ್ರಮಾಚರಣೆ ಮಾಡಿದ್ದಾರೆ.ವೇದಿಕೆ ಮೇಲೆನೆ ಆರ್ಸಿಬಿ ಮತ್ತು ಪಂಜಾಬ್ ಪಂದ್ಯದ ಸ್ಕ್ರೀನ್ ವ್ಯವಸ್ಥೆ ಸಹ ಮಾಡಿಕೊಂಡಿದ್ದು, ಸ್ಕ್ರೀನ್ ಪಕ್ಕದಲ್ಲಿ ನಿಂತು ನವಜೋಡಿಗಳು ಟೀ ಶರ್ಟ್ ಹಿಡಿದು ಆರ್ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ. ಇದೀಗ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದೆ.