ಧಾರವಾಡ : ಅತ್ಯಾಚಾರ ಪ್ರಕಾರಣಗಳಲ್ಲಿ ಕಠಿಣ ಶಿಕ್ಷೆ ಆದರೆ ಇಂತಹ ಘಟನೆ ಕಡಿಮೆಯಾಗುತ್ತವೆ ಈ ಸಂಬಂಧ ನ್ಯಾಯಾಂಗದಲ್ಲಿ ಬದಲಾವಣೆ ಬರಬೇಕು.ಅತ್ಯಾಚಾರ ಪ್ರಕರಣಗಳಲ್ಲಿ ಆದಷ್ಟು ಬೇಗ ಶಿಕ್ಷೆ ಆಗಬೇಕು ಎಂದು ನಿವೃತ್ತ ನ್ಯಾ.ಸಂತೋಷ ಹೆಗಡೆ ಅವರು ತಿಳಿಸಿದರು.
ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಗ ತಪ್ಪು ಮಾಡಿದ್ರೆ ಶಿಕ್ಷೆ ಆಗುತ್ತೆ ಎಂಬ ಭಾವನೆ ಬರುತ್ತದೆ ಇಂತಹ ಪ್ರಕರಣಗಳಲ್ಲಿ ಗಂಭೀರತೆಯನ್ನು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಜನರಲ್ಲಿ ಎಲ್ಲೆಡೆ ಆಗುತ್ತೆ ಬಿಡಿ ಎಂಬ ಭಾವನೆ ಇದೆ. ಎನ್ಕೌಂಟರ್ ಮಾಡೋದು ಶಿಕ್ಷೆ ರೀತಿ ಅಲ್ಲ ಎಂದು ತಿಳಿಸಿದರು.
ಅತ್ಯಾಚಾರ ಆರೋಪ ಸಾಬೀತಾದಾಗ ಶೀಘ್ರವೇ ಶಿಕ್ಷೆಯಾಗಬೇಕು ಗಂಭೀರವಾದ ಶಿಕ್ಷೆ ಕೊಟ್ಟರೆ ಸಮಾಜಕ್ಕೆ ಸಂದೇಶ ಹೋಗುತ್ತದೆ ಇಂಥ ತಪ್ಪು ಮಾಡಿದರೆ ಬೇಗ ಶಿಕ್ಷೆಯಾಗುತ್ತದೆ ಎಂಬ ಭಾವನೆ ಜನರಲ್ಲಿ ಬರುತ್ತದೆ ಎಂದು ಸಂತೋಷ್ ಹೆಗಡೆ ತಿಳಿಸಿದರು.