ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಟಾ ಮಾಡಿದ ಪ್ರಕರಣದಲ್ಲಿ ಸದ್ಯ ನಟಿ ರನ್ಯ ರಾವ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದೀಗ ನಟಿ ರನ್ಯಾರಾವ್ ಕಾರು ಚಾಲಕ ದೀಪಕ ಕೂಡ ಅರೆಸ್ಟ್ ಆಗಿದ್ದಾರೆ. ಬೆಂಗಳೂರಿನ ಸಿಸಿಬಿ ಪೊಲೀಸರು ಕಾರು ಚಾಲಕ ದೀಪಕ್ ನನ್ನು ಅರೆಸ್ಟ್ ಮಾಡಿದ್ದಾರೆ.
ನಟಿ ರನ್ಯಾ ರಾವ್ ಕಾರು ಚಾಲಕನಾಗಿದ್ದಂತಹ ದೀಪಕ್, ಹಲವು ಜನರ ಬಳಿ ಶೇರು ಮಾರುಕಟ್ಟೆಯಲ್ಲಿ ಹಣ ಡಬಲ್ ಮಾಡುವುದಾಗಿ ಹೇಳಿ ಅವರಿಂದ ಹಣ ಪಡೆದು ವಂಚನೆ ಎಸಗಿದ್ದ. ಈ ಕುರಿತು ಜನರು ದೂರು ನೀಡಿದ್ದರು. ಜನರಿಂದ ಹಣ ಪಡೆದು ಆರು ತಿಂಗಳಿನಿಂದ ರನ್ಯಾರಾವ್ ಕಾರು ಚಾಲಕ ದೀಪಕ್ ನಾಪತ್ತೆಯಾಗಿದ್ದ. ಇದೀಗ ಬೆಂಗಳೂರಿನ ಸಿಸಿಬಿ ಪೊಲೀಸರು ದೀಪಕ್ ನಾನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.