ಬೆಂಗಳೂರು : ಸಾರಿಗೆ ಬಸ್ಗಳಲ್ಲಿ ಟಿಕೆಟ್ 15 ರಷ್ಟು ಹೆಚ್ಚಿಗೆ ಮಾಡಿ ರಾಜ್ಯ ಸರ್ಕಾರ ನಿನ್ನೆ ಅಧಿಕೃತ ಆದೇಶ ಹೊರಡಿಸಿದೆ. ಈ ವಿಚಾರವಾಗಿ ವಿಪಕ್ಷ ಬಿಜೆಪಿ ನಾಯಕರು ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಪ್ರಯಾಣಿಕರಿಗೆ ಹೂ ನೀಡಿ ಪ್ರತಿಭಟನೆ ನಡೆಸಿದರು. ಈ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ಅವಧಿಯಲ್ಲಿ ಕೂಡ ಸಾರಿಗೆ ಬಸ್ ಗಳ ಟಿಕೆಟ್ ದರದಲ್ಲಿ ಏರಿಕೆ ಮಾಡಿರುವ ಪಟ್ಟಿ ರಿಲೀಸ್ ಮಾಡಿದ್ದಾರೆ.
ಹೌದು ಬಿಜೆಪಿ ಅವಧಿಯಲ್ಲಿ ಸಾರಿಗೆ ಸಚಿವರಾಗಿದ್ದ ವಿಪಕ್ಷ ನಾಯಕ ಆರ್. ಅಶೋಕ್ ಅವಧಿಯಲ್ಲಿ ಟಿಕೆಟ್ ದರ ಏರಿಕೆ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟಾಂಗ್ ಕೊಟ್ಟಿದ್ದಾರೆ.ಬಿಜೆಪಿ ಸರ್ಕಾರ ಇದ್ದಾಗ ವಿಪಕ್ಷ ನಾಯಕ ಆರ್. ಅಶೋಕ್ ಅವಧಿಯಲ್ಲಿ ಯಾವ್ಯಾವ ವರ್ಷದಲ್ಲಿ ಎಷ್ಟೆಷ್ಟು ದರ ಏರಿಕೆ ಎಂದು ಪಟ್ಟಿ ರಿಲೀಸ್ ಮಾಡಿದೆ.
ಶ್ರೀ @RAshokaBJP ಸಾರಿಗೆ ಸಚಿವರಾಗಿದ್ದಾಗ ಬಿಜೆಪಿ ಪಕ್ಷ 7 ಬಾರಿ ಶೇ. 47.8 ರಷ್ಟು ಬಸ್ ದರ ಹೆಚ್ಚಿಸಿತ್ತು.
ನಮ್ಮನ್ನು ಟೀಕಿಸುವ ಬಿಜೆಪಿಗೆ ಯಾವ ನೈತಿಕತೆಯೂ ಇಲ್ಲ, ನಾಚಿಕೆಯೂ ಇಲ್ಲ!#RamalingaReddy #KSRTC #BMTC #KKRTC #NWKRTC #Karnataka #BusFare #Shakti pic.twitter.com/3kaCFtpk6D
— Ramalinga Reddy (@RLR_BTM) January 4, 2025