ರಾಯಚೂರು : ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಯಡವಟ್ಟು ಮಾಡಿಕೊಂಡಿದ್ದು,, ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಬ್ಲಡ್ ಗ್ರೂಪ್ ಅನ್ನೆ ಬದಲಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳು ಬದಲಿ ಬ್ಲಡ್ ಗ್ರೂಪ್ ವರದಿ ಕೊಟ್ಟಿದ್ದಾರೆ.
ಶಾಹಿಮ್ ಬೇಗಂ ಎನ್ನುವವರು ಕೈಮುರಿದು ಗಂಭೀರವಾಗಿ ಗಾಯಗೊಂಡಿದ್ದರು. ಏಪ್ರಿಲ್ 14ರಂದು ರಾಯಚೂರಿನ ರಿಮ್ಸ್ ಗೆ ಶಾಹಿಂ ಬೇಗಂ ದಾಖಲಾಗಿದ್ದರು. ರೋಗಿಯ ಸಂಬಂಧಿಕರ ಸಮಯ ಪ್ರಜ್ಞೆ ಮತ್ತು ಭಾರಿ ಅನಾಹುತ ಒಂದು ತಪ್ಪಿದೆ.
ತಪ್ಪಾಗಿ ಬದಲಿ ಗ್ರೂಪ್ ರಕ್ತ ಹಾಕಿದರೆ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಶಾಹಿಂ ಬೇಗಂ ಗೆ ಆಪರೇಷನ್ ಮಾಡಲು ಹೆಚ್ಚಿನ ರಕ್ತದ ಅವಶ್ಯಕತೆ ಇತ್ತು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿಗಳು ಬಿ ಪಾಸಿಟಿವ್ ರಕ್ತ ವರದಿ ನೀಡಿದ್ದಾರೆ.