ಬೆಂಗಳೂರು : ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 16ನೇ ಬಜೆಟ್ ಮಂಡಿಸಿದರು. 2025-26ನೇ ಸಾಲಿನ ಬಜೆಟ್ ಮಂಡನೆ ಕುರಿತು ಇಂದು ಬೆಂಗಳೂರಿನಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು.ಸಾಲ ಹೆಚ್ಚಾಗಿದೆ ಎಂದು ವಿಪಕ್ಷ ನಾಯಕರು ಹೇಳಿಕೆಗೆ ಆರ್. ಅಶೋಕ್ ಹಣಕಾಸಿನ ಜವಾಬ್ದಾರಿ & ಬಜೆಟ್ ನಿರ್ವಹಣಾ ಕಾಯ್ದೆಯ ಬಗ್ಗೆ ಓದಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 4,09,549 ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ದೇನೆ. ಕಳೆದ ಬಾರಿಗಿಂತ ಈ ಬಾರಿ ಬಜೆಟ್ ಗಾತ್ರ ಹೆಚ್ಚಾಗಿದೆ. 38,166 ಕೋಟಿ ರೂಪಾಯಿ ಹೆಚ್ಚಾಗಿದೆ. ಇದೊಂದು ಪೂರ್ಣಪ್ರಮಾಣದ ಬಜೆಟ್ ಆಗಿದೆ. ಕಳೆದ ಬಾರಿಗಿಂತ ಈ ಬಾರಿ ಬೆಳವಣಿಗೆ ಇದರ ಶೇಕಡ 10.3ರಷ್ಟು ಹೆಚ್ಚಾಗಿದೆ ಈ ಬಾರಿ 2,92, 476 ಕೋಟಿ ರಾಜಸ್ವ ಸಂಗ್ರಹವಾಗಿದೆ. ರಾಜಸ್ವ 3,11,738 ಕೋಟಿ ರೂಪಾಯಿ ಆಗಿದೆ.
ಸಾಲ ಹೆಚ್ಚಾಗಿದೆ ಎಂದು ವಿಪಕ್ಷ ನಾಯಕರು ಹೇಳುತ್ತಾರೆ. ಜೆಎಸ್ಡಿಪಿ ಶೇಕಡ 25ರೊಳಗೆ ಸಾಲದ ಪ್ರಮಾಣ ಇರಬೇಕು ಆರ್ಥಿಕವಾಗಿ ಶೇ. 25 ರಷ್ಟು ಕಾಪಾಡಬೇಕು ಅಂದರೆ 25 ಪರ್ಸೆಂಟ್ ಒಳಗೆ ಸಾಲ ಇರಬೇಕು, ಫಿಸಿಕಲ್ ರೆಸ್ಪಾನ್ಸಿಬಿಲಿಟಿ ಮ್ಯಾನೇಜ್ಮೆಂಟ್ ಆಕ್ಟ್ ಪ್ರಕಾರವೇ ಶೇಕಡ 24.91ರ ಪ್ರಮಾಣದಲ್ಲಿ ಸಾಲ ಮಾಡಲಾಗಿದೆ ಎಂದು ತಿಳಿಸಿದರು.
ವಿತ್ತಿಯ ಕೊರತೆ ಶೇಕಡಾ 3ಕ್ಕಿಂತ ಜಾಸ್ತಿ ಹೋಗಬಾರದು.ಶೇಕಡಾ 2.95 ರ ಒಳಗೆ ವಿತ್ತಿಯ ಕೊರತೆ ಇಟ್ಟಿದ್ದೇವೆ. ಪಾಪ ಅಶೋಕಗೆ ಇದೆಲ್ಲ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಯ ಬಗ್ಗೆ ಓದಿಕೊಳ್ಳಲಿ. ಆಮೇಲೆ ವಿಪಕ್ಷದವರು ಮಾತನಾಡಲಿ ಎಂದು ತಿರುಗೇಟು ನೀಡಿದರು.