ಹಾಸನ : ಮೈಸೂರಿನ ಕೆ ಆರ್ ನಗರದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಕಟಿಸಲಿದೆ.
ಇತ್ತ ಪ್ರಜ್ವಲ್ ತಂದೆ ಎಚ್ಡಿ ರೇವಣ್ಣ ಹಾಗೂ ತಾಯಿ ಭವಾನಿ ಅವರು ಇದುವರೆಗೂ ಮನೆಯಿಂದ ಆಚೆ ಬಂದಿಲ್ಲ ಯಾರು ಸಹ ಇದುವರೆಗೂ ಮನೆಯಿಂದ ಹೊರಗಡೆ ಬಂದಿಲ್ಲ ಇದೀಗ ಪ್ರಜ್ವಲ್ ಗೆ ಈಗಾಗಲೇ ದೋಷಿ ಎಂದು ನ್ಯಾಯಾಲಯ ತಿಳಿಸಿತ್ತು. ಶಿಕ್ಷೆ ಆಗುವುದಂತೂ ಗ್ಯಾರಂಟಿ ಈ ಹಿನ್ನೆಲೆಯಲ್ಲಿ ಕನಿಷ್ಠ ಶಿಕ್ಷೆ ಆಗಲಿ ಎಂದು ಹಾಸನ ಜಿಲ್ಲೆಯ ಹೊಳೆನರಸೀಪುರದ ಹರದನಹಳ್ಳಿಯ ಮನೆಯಲ್ಲಿ ತಂದೆ ಎಚ್ ಡಿ ರೇವಣ್ಣ ಅವರು ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.