ಬೆಂಗಳೂರು : ಬೆಂಗಳೂರಿನ ಯಲಹಂಕ ಏರ್ ಫೋರ್ಸ್ ಸ್ಟೇಷನ್ ನಲ್ಲಿ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ನೋಂದಣಿ ಆರಂಭವಾಗಿದ್ದು, ವೀಕ್ಷಣೆಗೆ 1 ಸಾವಿರ ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ಹೌದು, ಫೆಬ್ರವರಿ 10ರಿಂದ 14 ರವರೆಗೆ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಶೋ ನಡೆಯಲಿದ್ದು, ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ 1 ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದ್ದು, ಆನ್ಲೈನ್ ನಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಫೆಬ್ರವರಿ 10ರಂದು ಉದ್ಘಾಟನಾ ಸಮಾರಂಭ ಇರುವುದರಿಂದ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಶುಲ್ಕ ಪಾವತಿಸಿ ಟಿಕೆಟ್ ಖರೀದಿಸಿದವರು ಫೆಬ್ರವರಿ 11 ರಿಂದ 14ರ ವರೆಗೆ ನಾಲ್ಕು ದಿನಗಳಲ್ಲಿ ಯಾವುದಾದರೂ ಒಂದು ದಿನ ಏರ್ ಡಿಸ್ ಪ್ಲೇ ಏರಿಯಾಗೆ ತೆರಳಿ ಪ್ರದರ್ಶನ ವೀಕ್ಷಿಸಬಹುದು. ಬೆಳಗ್ಗೆ ಮತ್ತು ಮಧ್ಯಾಹ್ನದ ಅವಧಿ ಸೇರಿ ನಿತ್ಯ ಎರಡು ಬಾರಿ ಪ್ರದರ್ಶನ ಇರುತ್ತದೆ. ವಿದೇಶಿಯರಿಗೆ 50 ಯುಎಸ್ ಡಾಲರ್ ಶುಲ್ಕ ನಿಗದಿಪಡಿಸಲಾಗಿದೆ.
ಏರೋ ಇಂಡಿಯಾದಲ್ಲಿ 140ಕ್ಕೂ ಅಧಿಕ ವಿದೇಶಿ ರಕ್ಷಣಾ ಉತ್ಪನ್ನಗಳ ಉತ್ಪಾದಕ ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಏರೋ ಇಂಡಿಯಾ 2025 – ವಾಯು ಶಕ್ತಿಯ ಮಹಾ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ. ಭಾರತದ ಅತ್ಯಾಧುನಿಕ ತಂತ್ರಜ್ಞಾನ, ವಾಯುಪಡೆಯ ಶಕ್ತಿ ಮತ್ತು ನಮ್ಮ ರಾಷ್ಟ್ರದ ಭದ್ರತೆಗೆ ಸಮರ್ಪಿತವಾದ ಶಕ್ತಿಯನ್ನು ಪ್ರದರ್ಶಿಸುವ ವಿಸ್ಮಯಕಾರಿ ಮತ್ತು ಜಾಗತಿಕವಾಗಿ ಆಕರ್ಷಿಸುವ ಏರ್ ಶೋಗೆ ಸಾಕ್ಷಿಯಾಗಿ! ಈ ಕಾರ್ಯಕ್ರಮವು ತಂತ್ರಜ್ಞಾನ ಮತ್ತು ರಕ್ಷಣೆಯಲ್ಲಿ ಭಾರತ ಎಷ್ಟು ಮುಂದುವರಿದಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ವಿಜ್ಞಾನ ಮತ್ತು ಶಾಂತಿಯ ಈ ಭವ್ಯ ಪ್ರದರ್ಶನವನ್ನು ತಪ್ಪಿಸಿಕೊಳ್ಳಬೇಡಿ ಎಂಬುದಾಗಿ ಮನವಿ ಮಾಡಿದೆ.
ಇನ್ನೂ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರು https://www.aeroindia.gov.in/visitor-registration ಲಿಂಕ್ ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಫೆಬ್ರವರಿ 10 ರಿಂದ 14ವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದ್ದು, ಈ ಬಾರಿಯ ವೈಮಾನಿಕ ಪ್ರದರ್ಶನ ‘ಕೋಟಿ ಅವಕಾಶಗಳ ಪಥ’ ಎನ್ನುವ ಧ್ಯೇಯವನ್ನು ಹೊಂದಿದೆ.#AeroIndia | #Airshow | #AeroIndia2025 | @AeroIndiashow pic.twitter.com/JUEs1jUDUp
— DD Chandana News (@DDChandanaNews) January 6, 2025