ಚಿಕ್ಕಮಗಳೂರು : ದಲಿತ ಯುವಕನೊಬ್ಬ ದೇಗುಳಕ್ಕೆ ಪ್ರವೇಶಿಸಿದ್ದಾನೆ ಎಂದು ದೇಗುಲದ ಅರ್ಚಕ ದೇವಸ್ಥಾನಕ್ಕೆ ಬೀಗ ಹಾಕಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ನರಸೀಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ದಲಿತ ಯುವಕ ಪ್ರವೇಶಿಸಿದ್ದಕ್ಕೆ ದೇವಾಲಯಕ್ಕೆ ಅರ್ಚಕ ಬೀಗ ಹಾಕಿದ್ದಾರೆ. ಎರಡು ಸಮುದಾಯದ ನಡುವೆ ಅಸಮಾಧಾನವಾಗದಂತೆ ದೇಗುಲಕ್ಕೆ ಅರ್ಚಕ ಬೀಗ ಜಡೆದಿದ್ದಾರೆ. ತಿರುಮಲ್ಲೇಶ್ವರ ಸ್ವಾಮಿ ದೇವಾಲಯ ಪ್ರವೇಶ ಮಾಡಿದ್ದ ದಲಿತ ಯುವಕ ದೇಗುಲಕ್ಕೆ ಬೀಗ ಹಾಕಿ ಕಂದಾಯ ಅಧಿಕಾರಿಗಳಿಗೆ ಅರ್ಚಕ ಬೀಈಗ ನೀಡಿದ್ದಾರೆ.
ನರಸೀಪುರದಲ್ಲಿ ಕುರುಬ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹಾಗಾಗಿ ಚಿಕ್ಕಮಗಳೂರು ತಹಶೀಲ್ದಾರ ನೇತೃತ್ವದಲ್ಲಿ ಸಭೆ ನಡೆದಿದ್ದು, ದಲಿತರು ಕುರುಬ ಸಮುದಾಯದವರ ಸಭೆ ಎನ್ನು ನಡೆಸಿದ್ದಾರೆ. ಎಲ್ಲರಿಗೂ ಮುಕ್ತ ಪ್ರವೇಶ ನೀಡುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.ಹಾಗಾಗಿ ಎಂದಿನಂತೆ ನರಸೀಪುರ ಗ್ರಾಮದ ದೇವಾಲಯದಲ್ಲಿ ಪೂಜೆ ಪುನಸ್ಕಾರ ನಡೆಯಿತು.