ನವದೆಹಲಿ : ರಾಜ್ಯ ಸರ್ಕಾರ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 4 ರೂ. ಏರಿಕೆ ಮಾಡಿದೆ. ಅಲ್ಲದೆ 4 ರೂಪಾಯಿ ಸರ್ಕಾರಕ್ಕೆ ಬರಲ್ಲ ರೈತರಿಗೆ ಹೋಗುತ್ತದೆ ಹಾಗಾಗಿ ರೈತರಿಗೋಸ್ಕರ ಹಾಲಿನದ ಏರಿಕೆ ಮಾಡಲಾಗಿದೆ ಎಂದು ನಿನ್ನೆ ಕಾಂಗ್ರೆಸ್ ಹಲವು ನಾಯಕರು ಸ್ಪಷ್ಟನೆ ನೀಡಿದ್ದರು. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಕೂಡ ನಂದಿನಿ ಹಾಲಿನ ದರ ಏರಿಕೆ ಮಾಡಿದ್ದು ಈ ಒಂದು ಹಣ ಸರ್ಕಾರಕ್ಕೆ ಬರಲ್ಲ ನೇರವಾಗಿ ರೈತರಿಗೆ ಹೋಗುತ್ತದೆ ಎಂದು ಸ್ಪಷ್ಟಪಡಿಸಿದರು.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಂದಿನಿ ಹಾಲಿನ ದರ ಏರಿಕೆ ಕುರಿತು ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಏನಾದರೂ ಹೇಳಲಿ ರೈತರು ಬದುಕಬೇಕಲ್ವಾ? ಅವರಿಗೆ ಜಿಎಸ್ಟಿ ಮೇವಿನ ಬೆಲೆ ಇಳಿಕೆ ಮಾಡಲು ಹೇಳಿ ಪೆಟ್ರೋಲ್ ಡೀಸೆಲ್ ಇದರ ಇಳಿಕೆ ಮಾಡಲು ಹೇಳಿ ಬೆಲೆ ಏರಿಕೆ ಹಣ ಸರ್ಕಾರಕ್ಕೆ ಬರಲ್ಲ ರೈತರಿಗೆ ಹೋಗುತ್ತದೆ. ಹಾಲಿನ ಸಹಕಾರ ವ್ಯವಸ್ಥೆ ಬಗ್ಗೆ ಅವರ ಅಣ್ಣನ ಕೇಳೋಕೆ ಹೇಳಿ ಎಂದು ದೆಹಲಿಯಲ್ಲಿ ಎಚ್ ಡಿ ಕುಮಾರಸ್ವಾಮಿಯವರು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಇನ್ನು ಬಿಜೆಪಿ ಶಾಸಕರಾದ ಶಿವರಾಂ ಹೆಬ್ಬಾರ್ ಹಾಗು ಎಸ್ ಟಿ ಸೋಮಶೇಖರ್ ಉಚ್ಚಾಟನೆ ವಿಚಾರವಾಗಿ ಅವರ ಪಕ್ಷದ ವಿಚಾರ ನನಗೆ ಅವಶ್ಯಕತೆ ಇಲ್ಲ. ನಾನ್ಯಾಕೆ ಅವರ ಪಕ್ಷದ ವಕ್ತಾರ ಆಗಲಿ? ಎಂದು ಪ್ರಶ್ನಿಸಿದರು. ಕೊಲೆಗೆ ಸಂಚು ಎಂದು ಎಂಎಲ್ಸಿ ರಾಜೇಂದ್ರ ಆರೋಪ ಮಾಡಿರುವ ವಿಚಾರವಾಗಿ ನನಗೆ ಈ ವಿಚಾರ ಗೊತ್ತಿಲ್ಲ. ಗೃಹ ಸಚಿವರು ಇದ್ದಾರೆ, ಈ ಕುರಿತು ತನಿಖೆ ಮಾಡಿಸುತ್ತಾರೆ ಎಂದು ತಿಳಿಸಿದರು.