ಬೆಂಗಳೂರು : 2025-26ನೇ ಸಾಲಿನ 1 ರಿಂದ 10ನೇ ತರಗತಿ ಮಾರಾಟ ಪಠ್ಯಪುಸ್ತಕಗಳ ಬೆಲೆ ನಿಗದಿ ಕುರಿತು ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ.
2025-26ನೇ ಸಾಲಿಗೆ ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ SATS ಮುಖಾಂತರ ಆನ್‌ಲೈನ್‌ನಲ್ಲಿ ಶಾಲೆಗಳಿಂದ ಸಲ್ಲಿಕೆಯಾಗಿರುವ 1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು ಹಾಗೂ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದಿಂದ ಭೌತಿಕವಾಗಿ ಸಲ್ಲಿಕೆಯಾಗಿರುವ ಅರೇಬಿಕ್ ಪಠ್ಯಪುಸ್ತಕಗಳ ಬೇಡಿಕೆಯನ್ವಯ ಮಾರಾಟ ಪಠ್ಯಪುಸ್ತಕಗಳನ್ನು ಮುದ್ರಿಸಿ ಬ್ಲಾಕ್ ಹಂತಕ್ಕೆ ಸರಬರಾಜು ಮಾಡಲು ಅರ್ಹ ಖಾಸಗಿ ಮುದ್ರಕರುಗಳಿಗೆ ಕಾರ್ಯಾದೇಶವನ್ನು ಜಾರಿಮಾಡಲಾಗಿರುತ್ತದೆ.
ತರಗತಿವಾರು ಹಾಗೂ ಶೀರ್ಷಿಕವಾರು ಪಠ್ಯಪುಸ್ತಕಗಳ ಮಾರಾಟ ಬೆಲೆಯನ್ನು ಕೆಳಕಂಡಂತೆ ನಿಗದಿಪಡಿಸಿ ಆದೇಶಿಸಿದೆ. ನಿಗದಿಪಡಿಸಿರುವ ದರದ ಪ್ರಕಾರ ಆಯಾ ಮಾರಾಟ ಪಠ್ಯಪುಸ್ತಕದಲ್ಲಿ ದರವನ್ನು ಮುದ್ರಿಸಲು ಸಂಬಂಧಿಸಿದ ಮುದ್ರಕರಿಗೆ ತಿಳಿಸಿದೆ ಹಾಗೂ ಈ ಕಛೇರಿವತಿಯಿಂದ ನೀಡಲಾಗುವ ಸುತ್ತೋಲೆಯಂತೆ ಪಠ್ಯಪುಸ್ತಕಗಳನ್ನು ವಿತರಿಸಿ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಜಿಲ್ಲಾ ಮತ್ತು ತಾಲ್ಲೂಕು ಹಂತದ ಅಧಿಕಾರಿಗಳಿಗೆ ಸೂಚಿಸಿದೆ.