ಹಾಸನ : ಹಾಸನದಲ್ಲಿ ನಾಪತ್ತೆಯಾಗಿದ್ದ ಗರ್ಭಿಣಿ ಮೃತ ದೇಹ ಕೆರೆಯಲ್ಲಿ ಪತ್ತೆಯಾಗಿದ್ದು, ಹೊನ್ನವಳ್ಳಿ ಗ್ರಾಮದ ಕೆರೆಯಲ್ಲಿ ಗರ್ಭಿಣಿ ವಂದನ (24) ಶವ ಇದೀಗ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಪತಿ ಮತ್ತು ಆತನ ಪೋಷಕರ ವಿರುದ್ಧ ವರದಕ್ಷಣೆ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಮಗಳ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ವಂದನ ಪೋಷಕರು ಆರೋಪಿಸಿದ್ದಾರೆ.
ಕಳೆದ ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ರೂಪಿತ್ ಹಾಗೂ ಒಂವಂದನಾ ದನ ಮದುವೆಯಾಗಿದ್ದರು ಕೆಲಸ ಮಾಡುತ್ತಿದ್ದರು. ಡಿಸೆಂಬರ್ 2 ರಂದು ಅತ್ತೆ ಮಂಜುಳಾ ಹಾಗೂ ಸೊಸೆ ವಂದನಾ ನಡುವೆ ಜಗಳ ಆಗಿತ್ತು. ಮೂರು ದಿನಗಳ ಹಿಂದೆ ವಂದನ ನಾಪತ್ತೆಯಾಗಿದ್ದಳು. ನಿನ್ನೆ ಸಂಜೆ ಹೊನ್ನವಳ್ಳಿ ಗ್ರಾಮದ ಕೆರೆಯಲ್ಲಿ ವಂದನ ಶವ ಪತ್ತೆಯಾಗಿದೆ. ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಗೊಂಡಿದ್ದು ಪೋಷಕರಿಗೆ ಶುಶವ ಭ ಹಸ್ತಾಂತರಿಸಲಾಗಿದೆ. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








