ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಲ್ತುಳಿತ ದುರಂತ ನಡೆದ ಬಳಿಕ ಯಾವುದೇ ಕ್ರಿಕೆಟ್ ಪಂದ್ಯ ಆಯೋಜಿಸಿಲ್ಲ ಇದೀಗ ಇಂದು ವಿಧಾನಸೌಧದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು ಈ ಒಂದು ಸಭೆಯಲ್ಲಿ ಹಲವು ಷರತ್ತುಗಳೊಂದಿಗೆ ಜನ ಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯ ನಡೆಸುವ ಕುರಿತು ಚರ್ಚೆ ನಡೆಯಿತು.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪದ್ಯ ನಡೆಸಲು ಅನುಮತಿ ನೀಡಬೇಕು ಎಂದು ಈಗಾಗಲೇ KSCA ಮನವಿ ಮಾಡಿದ್ದರು. ಈ ವಿಚಾರವಾಗಿ ರಾಜ್ಯ ಸರ್ಕಾರ ನಮ್ಮ ಜಿಬಿಎ ಚೀಫ್ ಕಮಿಷನರ್ ಅವರ ಅಧ್ಯಕ್ಷತೆಯಲ್ಲಿ ನಮ್ಮ ಪೊಲೀಸ್ ಕಮಿಷನರ್, ಜಾಯಿಂಟ್ ಕಮಿಷನರ್, ಪಿಡಬ್ಲ್ಯೂಡಿ ರೆಪ್ರೆಸೆಂಟೇಟಿವ್, ಹೆಲ್ತ್ ಡಿಪಾರ್ಟ್ಮೆಂಟ್ ಸೇರಿಸಿ ಒಂದು ಸಮಿತಿ ಮಾಡಿತ್ತು.
ಅದರ ವರದಿ ಇಂದು ನಮ್ಮ ಕೈ ಸೇರಿದೆ. ಅದರ ಸಾಧಕ ಭಾದಕ ಕುರಿತು ಚರ್ಚೆ ಮಾಡಿದ್ದು ಕ್ಯಾಬಿನೆಟ್ ನಲ್ಲಿ ಗೃಹ ಸಚಿವರಿಗೆ ಜವಾಬ್ದಾರಿ ಕೊಟ್ಟಿದ್ದು ಈ ಒಂದು ವಿಚಾರದಲ್ಲಿ ನೀವು ಅವರ ಜೊತೆ ಚರ್ಚೆ ಮಾಡಿ ಅಂತಿಮವಾಗಿ ಕ್ಯಾಬಿನೆಟ್ ಗೆ ನೀವು ತಿಳಿಸಬೇಕು ಅಂತ ಹೇಳಿದರು. ಇವತ್ತು ನಾವು ಮಾಡಿದ ಈ ಸಭೆಯಲ್ಲಿ ಏನು ಚರ್ಚೆಯಾಗಿದೆ ಅದನ್ನು ಸಂಜೆ 6 ಗಂಟೆಗೆ ಕ್ಯಾಬಿನೆಟ್ ನಲ್ಲಿ ತಿಳಿಸುತ್ತೇನೆ. ಕ್ಯಾಬಿನೆಟ್ ನಲ್ಲಿ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದರ ಪ್ರಕಾರ ಅಂತಿಮವಾಗಿ ಅನೌನ್ಸ್ ಮಾಡುತ್ತೇವೆ ಎಂದರು.








