ಉಡುಪಿ : ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಹಿತಿಯ ಮೇರೆಗೆ ಉಡುಪಿ ಮಹಿಳಾ ಠಾಣೆಯ ಪೊಲೀಸರು ಶಾರದಾ ನಗರದಲ್ಲಿರುವ ಮನೆಯ ಮೇಲೆ ದಾಳಿ ಮಾಡಿ ಓರ್ವ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.
ಸತೀಶ್ ಎಂಬಾತ ಸಂತ್ರಸ್ಥೆಗೆ ಕೆಲಸ ಕೊಡುವುದಾಗಿ ಪುಸಲಾಯಿಸಿ ಮೂಡಬಿದ್ರೆಯಿಂದ ಶಾರದ ನಗರದಲ್ಲಿರುವ ಶ್ರೀಲತಾ ಎಂಬವರ ಮನೆಗೆ ಕಳುಹಿಸಿದ್ದನು.ಅಲ್ಲಿ ಶ್ರೀಲತಾ ಆಕೆಯನ್ನು ವೇಶ್ಯಾವಾಟಿಕೆ ಚಟುವಟಿಕೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಈ ವೇಳೆ ರೂಮಿನಲ್ಲಿ ಕೂತುಕೊಂಡು ಇರು ಎಂದು ಒತ್ತಾಯದಿಂದ ಇರಿಸಿಕೊಂಡಿರುವುದಾಗಿ ದೂರಲಾಗಿದೆ. ಈ ಕುರಿತು ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಸಂತ್ರಸ್ಥೆಯನ್ನು ರಕ್ಷಿಸಿದರು. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.