ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಮಹತ್ವದ ಬೆಳೆವಣಿಗೆ ಆಗಿದೆ. ಈ ಪ್ರಕರಣ ಸಂಬಂಧ ಪೊಲೀಸ್ ಇನ್ಸ್ಪೆಕ್ಟರ್ ಐಯಣ್ಣ ರೆಡ್ಡಿ ಅವರನ್ನು ಬಂಧಿಸಲಾಗಿದೆ. ಇನ್ಸ್ ಪೆಕ್ಟರ್ ಅಯ್ಯಣ್ಣ ರೆಡ್ಡಿ ಬಂಧನವನ್ನು ಎಸ್‌ಐಟಿ ಮೂಲಗಳು ಖಚಿತಪಡಿಸಿವೆ.
ಹೌದು ಶಾಸಕ ಮುನಿರತ್ನ ವಿರುದ್ದದ ಅತ್ಯಾಚಾರ ಕೇಸ್ ತನಿಖೆ ಮತ್ತೆ ಚುರುಕುಗೊಂಡಿದೆ. ಜಾಮೀನು ಪಡೆದು ಮುನಿರತ್ನ ಹೊರ ಬಂದ ಬೆನ್ನಲ್ಲೇ ಇದೀಗ ಸಹಕರಿಸಿದ ಆರೋಪ ಮೇಲೆ ಹೆಬ್ಬಗೋಡಿ ಇನ್ಸ್ ಪೆಕ್ಟರ್ ಐಯಣ್ಣ ರೆಡ್ಡಿಯನ್ನ ಎಸ್ ಐಟಿ ಬಂಧಿಸಿದೆ. ಇವತ್ತು ಸಿಐಡಿಗೆ ಕರೆಸಿದ ಎಸ್ ಐಟಿ ಇನ್ಸ್ ಪೆಕ್ಟರ್ ರನ್ನ ವಿಚಾರಣೆ ನಡೆಸಿ ಬಂಧಿಸಿದೆ.ಕೇವಲ ಸಂತ್ರಸ್ಥೆ ಮಹಿಳೆ ಅಲ್ಲದೇ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಸೇರಿದಂತೆ ಕೆಲ ಮಹಿಳೆಯರು ಐಯಣ್ಣ ರೆಡ್ಡಿ ಬಗ್ಗೆ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ.
ರಾಜಕಾರಣಿಗಳ ಟ್ರ್ಯಾಪ್‌ಮಾಡಲು ಸಹಕರಿಸ್ತಿದ್ದ ಒಳಸಂಚಿನಲ್ಲಿ ಇನ್ಸ್ ಪೆಕ್ಟರ್ ಇರೋ ಆರೋಪ ಹಿನ್ನಲೆ ಬಂಧಿಸಿದ್ದು ವಿಚಾರಣೆ ಮಾಡಲಾಗ್ತಿದೆ. ಸದ್ಯ ಐಯಣ್ಣರೆಡ್ಡಿಯನ್ನ ಬಂಧಿಸಿದ್ದು, ನ್ಯಾಯಧೀಶರ ಮುಂದೆ ಹಾಜರುಪಡಿಸಿ ಎಸ್ ಐಟಿ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದಾರೆ. ತನಿಖೆ ಬಳಿಕವಷ್ಟೇ ಇನ್ಸ್ ಪೆಕ್ಟರ್ ಪಾತ್ರದ ಬಗ್ಗೆ ಸತ್ಯಾಸತ್ಯತೆ ಗೊತ್ತಾಗಲಿದೆ.