ನವದೆಹಲಿ : ಪೂರ್ವ ತೈವಾನ್ನ ಹುವಾಲಿಯನ್ ಪ್ರಾಂತ್ಯದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 8 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ, ಭೂಕಂಪವು 7.4 ತೀವ್ರತೆಯನ್ನು ಹೊಂದಿತ್ತು. ಆದರೆ, ಭೂಕಂಪದ ತೀವ್ರತೆ 7.7ರಷ್ಟಿತ್ತು ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದೆ.
ಭೂಕಂಪದಲ್ಲಿ ಏಳು ಜನರು ಮೃತಪಟ್ಟಿದ್ದು ಸುಮಾರು 730ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಭೂಕಂಪದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು ತೈವಾನ್ನಲ್ಲಿ ಭೂಕಂಪದಿಂದ ಸಾವನೋ ಸಂಭವಿಸಿರುವುದು ತೀವ್ರ ನೋವು ಉಂಟು ಮಾಡಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು, ಈ ದುರಂತದ ಸಮಯದಲ್ಲಿ ನನ್ನ ಆಲೋಚನೆಗಳು ತೈವಾನ್ ಜನರೊಂದಿಗೆ ಇವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಈ ಕಷ್ಟದ ಸಮಯದಲ್ಲಿ ತೈವಾನ್‌ಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ಪ್ರಜೆಗಳಿಗಾಗಿ ಸಹಾಯವಾಣಿ ತೆರೆದ ಕೇಂದ್ರ
ತೈವಾನ್ನಲ್ಲಿ 7.5 ತೀವ್ರತೆಯ ಭೂಕಂಪದ ನಂತರ, ದ್ವೀಪ ರಾಷ್ಟ್ರದಲ್ಲಿ ವಾಸಿಸುವ ಭಾರತೀಯ ಪ್ರಜೆಗಳಿಗೆ ಭಾರತ ಸಲಹೆ ನೀಡಿದೆ. ಸಲಹೆಯಲ್ಲಿ, ಇಂಡಿಯಾ ತೈಪೆ ಅಸೋಸಿಯೇಷನ್ ಅಗತ್ಯವಿರುವ ಭಾರತೀಯ ಪ್ರಜೆಗಳಿಗಾಗಿ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.
03 ಏಪ್ರಿಲ್ 2024 ರ ಬುಧವಾರ ಮುಂಜಾನೆ ಪೂರ್ವ ತೈವಾನ್ ಕರಾವಳಿಯಲ್ಲಿ ಸಂಭವಿಸಿದ ಭೂಕಂಪದ ದೃಷ್ಟಿಯಿಂದ, ತೈವಾನ್ನಲ್ಲಿ ವಾಸಿಸುವ ಎಲ್ಲಾ ಭಾರತೀಯ ಪ್ರಜೆಗಳಿಗೆ ಸಹಾಯ, ಮಾರ್ಗದರ್ಶನ ಅಥವಾ ಸ್ಪಷ್ಟೀಕರಣಕ್ಕಾಗಿ ಇಂಡಿಯಾ ತೈಪೆ ಅಸೋಸಿಯೇಷನ್ ಈ ಕೆಳಗಿನ ತುರ್ತು ಸಹಾಯವಾಣಿಯನ್ನು ಸ್ಥಾಪಿಸಿದೆ ಎಂದು ಐಟಿಎ ತಿಳಿಸಿದೆ.
ತೈವಾನ್ ನಲ್ಲಿ ಸಂಕಷ್ಟದಲ್ಲಿರುವ ಅಥವಾ ಸಹಾಯದ ಅಗತ್ಯವಿರುವ ಯಾವುದೇ ಭಾರತೀಯ ಪ್ರಜೆಗಳು 0905247906 ಸಂಪರ್ಕಿಸಬಹುದು ಅಥವಾ ad.ita@mea.gov.in ಬರೆಯಬಹುದು.”ಎಲ್ಲಾ ಭಾರತೀಯ ಪ್ರಜೆಗಳು ಸ್ಥಳೀಯ ಅಧಿಕಾರಿಗಳು ನೀಡಿದ ಸಲಹೆಗಳನ್ನು ಅನುಸರಿಸಲು ವಿನಂತಿಸಲಾಗಿದೆ” ಎಂದು ಭಾರತೀಯ ಸಂಸ್ಥೆ ತಿಳಿಸಿದೆ.
Deeply saddened by the loss of lives due to earthquakes in Taiwan today. Our heartfelt condolences to the bereaved families and wishes for a speedy recovery to the injured. We stand in solidarity with the resilient people of Taiwan as they endure the aftermath and recover from…
— Narendra Modi (@narendramodi) April 3, 2024
Earthquake situation in Taiwan
Water is splashing, roads are crumbling, Please stay safe
I pray for the safety of the Japanese people.#earthquake #tsunami
📹 via martytaka777 pic.twitter.com/smQ5ifhXLX pic.twitter.com/0PXQoRqSNJ— Wasi Shah PTI (@Wasi_S9) April 3, 2024