ಕಲಬುರ್ಗಿ : ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡಲ್ಲ ಎಂದು ಕಲಬುರ್ಗಿಯಲ್ಲಿ ವೈದಿಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದರು. ಈ ಮೂಲಕ ಸರ್ಕಾರಿ ಆಸ್ಪತ್ರೆ ಸಮೀಪ ಜನೌಷಧಿ ಕೇಂದ್ರ ಸ್ಥಾಪನೆ ಕುರಿತಂತೆ ಸ್ಪಷ್ಟನೆ ನೀಡಿದರು.
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧ ನೀಡುತ್ತಿದ್ದೇವೆ. ಮೆಡಿಕಲ್ ಶಾಪ್ ಇದ್ದರೆ ವೈದ್ಯರು ಅಲ್ಲಿಗೆ ಚೀಟಿ ಬರೆದುಕೊಡುತ್ತಾರೆ. ಅದನ್ನು ತಪ್ಪಿಸಲು ಜನ ಔಷಧಿ ಕೇಂದ್ರಕ್ಕೆ ನಾವು ಅನುಮತಿ ನೀಡುತ್ತಿಲ್ಲ. ಸರ್ಕಾರದ ಉಚಿತ ಔಷಧಿ ಬಡವರಿಗೆ ಸಿಗಲಿ ಎನ್ನುವುದು ನಮ್ಮ ಉದ್ದೇಶ ಎಂದು ಕಲಬುರ್ಗಿಯಲ್ಲಿ ವೈದಿಕ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದರು.