ಬೆಂಗಳೂರು : ದೀಪಾವಳಿ ಹಬ್ಬಕ್ಕಾಗಿ ಊರುಗಳಿಗೆ ತೆರಳಲು ಸಿದ್ಧತೆ ನಡೆಸಿರುವ ಪ್ರಯಾಣಿಕರಿಗೆ ಖಾಸಗಿ ಬಸ್ ಗಳು ಪ್ರಯಾಣ ದರ ಹೆಚ್ಚಿಸಿ ದುಪ್ಪಟ್ಟು ಹಣ ವಸೂಲಿ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಖಡಕ್ ಎಚ್ಚರಿಕೆ ನೀಡಿದ್ದರೂ, ಖಾಸಗಿ ಬಸ್ ಗಳ ಮಾಲೀಕರು ದುಪಟ್ಟು ದರ ವಸೂಲಿ ಮಾಡುತ್ತಿದ್ದಾರೆ.
BREAKING NEWS: ಐತಿಹಾಸಿಕ ಮೂರನೇ ಅವಧಿಗೆ ಅಧಿಕಾರ ಪಡೆದ ಚೀನಾ ನಾಯಕ ‘ಕ್ಸಿ ಜಿನ್ಪಿಂಗ್’ |Xi Jinping
ಬೆಂಗಳೂರಿನಿಂದ ಹುಬ್ಬಳ್ಳಿ, ಕಾರವಾರ, ಗೋವಾ, ಹೈದರಾಬಾದ್ ಸೇರಿದಂತೆ ನಾನಾ ಮಾರ್ಗಗಳ ನಡುವೆ ಅ.21, ಅ.24 ರ ಅವಧಿಯಲ್ಲಿ ವಿಮಾನ ಪ್ರಯಾಣ ದರಕ್ಕಿಂಗ ಬಸ್ ಪ್ರಯಾಣವೇ ದುಬಾರಿಯಾಗಿದೆ.
ಹೌದು, ಬೆಂಗಳೂರು-ಹುಬ್ಬಳ್ಳಿ ನಡುವೆ ವಿಮಾನಯಾನಕ್ಕೆ 3,694 ರೂ. ಪ್ರಯಾಣ ದರವಿತ್ತು. ಇದೇ ಮಾರ್ಗದಲ್ಲಿ ಸಾಮಾನ್ಯವಾಗಿ 500 ರಿಂದ 800 ರೂ. ಇದ್ದ ಖಾಸಗಿ ಬಸ್ ಟಿಕೆಟ್ ದರ ಹಬ್ಬದ ನೆಪದಲ್ಲಿ 5 ಸಾವಿರ ರೂ.ಗೆ ಏರಿಕೆಯಾಗಿದೆ. ಬೆಂಗಳೂರು-ಕಾರವಾರ ನಡುವೆ ಸ್ಲೀಪರ್ ಕೋಚ್ ಬಸ್ ಗೆ 4,099 ರೂ. ಇದ್ದರೆ ಬೆಂಗಳೂರು –ಮಂಗಳೂರು ನಡುವೆ 3,400 ರೂ. ಬೆಂಗಳೂರು-ಗೋವಾ ನಡುವೆ 4 ಸಾವಿರ ರೂ. ದರ ಹೆಚ್ಚಳ ಮಾಡಲಾಗಿದೆ.