ಬೆಂಗಳೂರು : ದೇಶ ವಿಭಜನೆ ಆದ ಬಳಿಕವೂ ಮೂರು ಯುದ್ಧ ಮಾಡಿದ್ದಾರೆ. ಆದರೂ ಪಾಠ ಕಲಿತಿಲ್ಲ ಕೆಣಕಿ ಕೆಣಕಿ ಯುದ್ಧಕ್ಕೆ ಕರೀತಾರೆ. ತಿನ್ನೋಕೆ ಅನ್ನ ಇಲ್ಲ ದೇಶ ಸಂಪೂರ್ಣ ಕಂಗೆಟ್ಟಿದೆ ಎಂದು ಬಿಜೆಪಿ ಮಾಜಿ ಸಚಿವ ಅಶ್ವಥ್ ನಾರಾಯಣ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದರು.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ ರಾಜಕೀಯ, ಆಡಳಿತದಲ್ಲಿ 50 ವರ್ಷಕ್ಕಿಂತ ಹೆಚ್ಚು ಅನುಭವವಿದೆ. ಯುದ್ಧ ಮಾಡಬಾರದು ಅಂತ ಸಾರ್ವಜನಿಕವಾಗಿ ಹೇಳಬೇಕಾ? ಬಿಗಿ ಭದ್ರತೆಯನ್ನು ಮಾಡಿ ಅಂತ ಹೇಳಿದ್ದಾರೆ ಸಂತೋಷ. ಬಿಗಿ ಭದ್ರತೆ ಮಾಡಿ ಅಂತ ಹೇಳಿ ಸತ್ತವರು ವಾಪಸ್ ಬರ್ತಾರ ಎಂದಿದ್ದಾರೆ. ಕುಮಕ್ಕು ಕೊಟ್ಟವರಿಗೆ ಪಾಠ ಕಲಿಸುವುದು ಬೇಡವಾ? ನಮ್ಮವರಿಗೆ ಬಂದು ಹೊಡೆದರು ಪರವಾಗಿಲ್ಲ? ಪಾಕಿಸ್ತಾನಕ್ಕೆ ಮಾತ್ರ ಏನು ಮಾಡಬೇಡಿ ಅನ್ನೋದು ಇವರ ಅರ್ಥವಾಗಿದೆ ಎಂದರು.