ಇಸ್ಲಾಮಾಬಾದ್ : ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಅಧಿಕೃತ ನಿವಾಸದಿಂದ 20 ಕಿ.ಮೀ. ದೂರದಲ್ಲಿ ಸ್ಫೋಟ ಸಂಭವಿಸಿದೆ. ಅಲ್ಲದೆ, ಭಾರತವು ಇಸ್ಲಾಮಾಬಾದ್ ಮೇಲೆವಾಯು ದಾಳಿ ನಡೆಸಿದೆ. ಹೀಗಾಗಿ ಷರೀಫ್ ಅವರನ್ನು ಸುರಕ್ಷಿತವಾಗಿ ಬಂಕರ್‌ಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ಹೇಳಿವೆ.
ಇಸ್ಲಾಮಾಬಾದ್‌ನ ಹೈ-ಸೆಕ್ಯುರಿಟಿ ವಲಯಗಳ ಬಳಿ ಸ್ಫೋಟಗಳು ವರದಿಯಾದ ನಂತರ ಪ್ರಧಾನಿ ಷರೀಫ್, ಸೇನಾ ಮುಖ್ಯಸ್ಥ ಅಸೀಂ ಮುನೀರ್, ಸಚಿವರು ಹಾಗೂ ಪ್ರಮುಖ ಸೇನಾಧಿಕಾರಿಗಳು ಸೇರಿದಂತೆ ಪ್ರಮುಖ ಸರ್ಕಾರಿ ವ್ಯಕ್ತಿಗಳ ಸುತ್ತ ಭದ್ರತೆಯನ್ನು ಗಮನಾರ್ಹವಾಗಿ ತೀವ್ರಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿಯವರ ಪ್ರಸ್ತುತ ಸ್ಥಳದ ಬಗ್ಗೆ ಯಾವುದೇ ಪಾಕಿಸ್ತಾನ ಸರ್ಕಾರದಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲವಾದರೂ, ಸಂಭವನೀಯ ಪ್ರತೀಕಾರದ ಕ್ರಮಗಳು ಅಥವಾ ಸ್ಥಿತಿ ಬಿಗಡಾಯಿಸುವ ಭೀತಿಯಿಂದ ದೃಷ್ಟಿಯಿಂದ ಮುನ್ನೆಚ್ಚರಿಕೆ ಪ್ರೋಟೋಕಾಲ್‌ಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಮೂಲಗಳು ಸೂಚಿಸುತ್ತವೆ.