ನವದೆಹಲಿ : ಪಹಲ್ಗಾಮ್ ಉಗ್ರರ ದಾಳಿಯಿಂದ ಹಲವಾರು ವ್ಯಾಪಾರ, ವಹಿವಾಟಿಗೆ ಹೊಡೆತ ಬಿದ್ದಿದ್ದು, ಇದೀಗ ಆಫ್ಘಾನಿಸ್ತಾನದಿಂದ ಆಮದು ಆಗುತ್ತಿದ್ದ ಡ್ರೈಫ್ರೂಟ್ಸ್ ಸಂಪೂರ್ಣವಾಗಿ ಕುಸಿತವಾಗಿದ್ದು, ಮುಂದಿನ ದಿನಗಳಲ್ಲಿ ಡ್ರೈಫ್ರೂಟ್ಸ್ ದರ ಹೆಚ್ಚಾಗುವ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೌದು ಉಗ್ರರ ದಾಳಿಯಿಂದ ಡ್ರೈಫ್ರೂಟ್ಸ್ ಗು ಇದೀಗ ಬಿಸಿ ತಟ್ಟಿದೆ. ಗಡಿ ಬಂದ್ ಹಿನ್ನೆಲೆಯಲ್ಲಿ ಡ್ರೈಫ್ರೂಟ್ಸ್ ಆಮದು ಸ್ಥಗಿತವಾಗಿದೆ. ಆಫ್ಗಾನಿಸ್ಥಾನದಿಂದ ಡ್ರೈಫ್ರೂಟ್ಸ್ ಬರುತ್ತಿತ್ತು. ಇದೀಗ ಅದಕ್ಕೆ ಬ್ರೇಕ್ ಬಿದ್ದಿದ್ದು, ಕಾಶ್ಮೀರದಿಂದಲೂ ಬೆಂಗಳೂರಿಗೆ ಒಣ ಹಣ್ಣು ಆಮದು ಆಗುತ್ತಿತ್ತು.
ಡ್ರೈಫ್ರೂಟ್ಸ್ ಪೂರೈಕೆ ಇಲ್ಲದೆ ವ್ಯಾಪಾರ ಏಕಾಏಕಿ ಕುಸಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಡ್ರೈ ಫ್ರೂಟ್ಸ್ ದರ ಏರಿಕೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಾಶ್ಮೀರದಿಂದ ಬಾದಾಮಿ ಗೋಡಂಬಿ ಕೇಸರಿ ಪೂರೈಕೆ ಇದೀಗ ಸಂಪೂರ್ಣವಾಗಿ ಇಳಿಮುಖವಾಗಿದ್ದು ಇದೀಗ ಹಲ್ಗಾಂ ದಾಳಿಯಿಂದ ಡ್ರೈ ಫ್ರೂಟ್ಸ್ ಎಫೆಕ್ಟ್ ತಟ್ಟಿದೆ.