ಬಳ್ಳಾರಿ : ಭಾರತದಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಎಂದು ವಿಶ್ವ ವಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ನೀಡಿದ್ದರಿಂದ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ವಿಚಾರವಾಗಿ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದು, ಈ ಹಿಂದೆ ಓವೈಸಿ ನಾವು ಮುಸ್ಲಿಮರು ಏನೆಂದು ತೋರಿಸುತ್ತೇವೆ ಅಂತ ಹೇಳಿದಾಗ ಕೇಸ್ ಹಾಕಲಿಲ್ಲ. ಸ್ವಾಮಿಜಿ ವಿರುದ್ಧ ಕೇಸ್ ಹಾಕುತ್ತೀರಾ? ಓವೈಸಿ ಅಂತವರೆಲ್ಲ ನಿಮ್ಮ ಬ್ರದರ್ಸ್ ಸ್ವಾಮೀಜಿ ನಿಮ್ಮ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದರು.
ಆಟೋದಲ್ಲಿ ಕುಕ್ಕರ್ ಬಾಂಬ್ ಇಟ್ಟವನಿಗೆ ನಾನು ಬ್ರದರ್ ಅಂದಿಲ್ಲ. ಕುಮಾರಸ್ವಾಮಿಗೆ ಕರಿಯ ಅಂದ್ರು. ಅದಕ್ಕೆ ಯಾಕೆ ಕೇಸ್ ಹಾಕಿಲ್ಲ ಸಚಿವ ಜಮೀರ್ ಅಹ್ಮದ್ ವಿರುದ್ಧ ಯಾಕೆ ಕೇಸ್ ಹಾಕಲಿಲ್ಲ? ವಿಧಾನಸೌಧದಲ್ಲಿ ಪಾಕಿಸ್ತಾನದಿಂದ ಘೋಷಣೆ ಕೂಗಿದರು. ಪಾಕಿಸ್ತಾನ ಜಿಂದಾಬಾದ್ ಕೂಗಿದವರ ಮೇಲು ಸರ್ಕಾರ ಕೇಸ್ ಹಾಕಿಲ್ಲ. ಸ್ವಾಮೀಜಿಗೆ ಕ್ಯಾನ್ಸರ್ ಇದೆ ಕೇಸ್ ಹಾಕಿ ಚಿತ್ರಹಿಂಸೆ ಕೊಡುತ್ತಿದ್ದೀರಾ? ಚುನಾವಣೆ ಬಂದಾಗ ಕಾಂಗ್ರೆಸ್ನವರು ಸ್ವಾಮೀಜಿಯ ಕಾಲು ಹಿಡಿದಿಲ್ವಾ?
ಈ ಹಿಂದೆ ಅಕ್ಬರೋದ್ದೀನ್ ಓವೈಸಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. 15 ನಿಮಿಷ ಪೊಲೀಸರನ್ನು ತೆಗೆಯಿರಿ ನಾವೇನು ಅಂತ ತೋರಿಸುತ್ತೆವೆ. ನಾವು ಮುಸ್ಲಿಮರು ಏನೆಂದು ತೋರಿಸುತ್ತೇವೆ ಅಂತ ಓವೈಸಿ ಹೇಳಿದರು ಆಗ ಅಕ್ಬರುದ್ದೀನ್ ಓವೈಸಿ ವಿರುದ್ಧ ನೀವು ಕೇಸ್ ಹಾಕಿದ್ರಾ? ಓವೈಸಿ ಅಂತವರೆಲ್ಲ ನಿಮ್ಮ ಬ್ರದರ್ಸ್ ಸ್ವಾಮೀಜಿ ನಿಮ್ಮ ವಿರೋಧಿಗಳು ಎಂದು ಬಳ್ಳಾರಿಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.