ಕಲಬುರಗಿ : ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬಿಜೆಪಿ ಕಚೇರಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರೊಬ್ಬರು ಹಣೆಗೆ ಕುಂಕುಮ ಇಡಲು ಬಂದಾಗ ನಿರಾಕರಿಸಿದ ಘಟನೆ ನಡೆದಿದೆ.ಸಿದ್ದರಾಮಯ್ಯ ಹಿಂದೂ ವಿರೋಧಿ, ಕೇಸರಿ ಕಂಡರೆ ಆಗಲ್ಲ, ಕೇಸರಿ ಶಲ್ಯ ಧರಿಸಲ್ಲ, ಕುಂಕುಮ ಹಾಕಲ್ಲ ಎಂದೆಲ್ಲಾ ಟೀಕಿಸುವ ರಾಜ್ಯದ ಬಿಜೆಪಿ ನಾಯಕರು ತಮ್ಮ ನಾಯಕನ ಈ ನಡೆಗೆ ಏನು ಹೇಳುತ್ತಾರೆ? ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವಿಸಿದೆ.
ಭಾರತೀಯ ನೌಕಾಪಡೆ ಬಂಧಿಸಲ್ಪಟ್ಟ 35 ಸೊಮಾಲಿಯಾ ಕಡಲ್ಗಳ್ಳರಿಗೆ 10 ದಿನ ಪೊಲೀಸ್ ಕಸ್ಟಡಿಗೆ
ಹೌದು ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬಿಜೆಪಿ ಕಚೇರಿಗೆ ಆಗಮಿಸಿದ ಆರ್. ಅಶೋಕ್ ಅವರಿಗೆ ಬಿಜೆಪಿ ಮುಖಂಡರು ಹಾರ ಹಾಕಿ ಸ್ವಾಗತಿಸಲು ಮುಂದಾದರು. ಈ ವೇಳೆ ಎರಡು ಹಾರಗಳನ್ನು ತಾವು ಹಾಕಿಕೊಳ್ಳದೆ ಬಿಜೆಪಿ ಹಿರಿಯ ಮುಖಂಡ ಡಾ ವಿಶ್ವನಾಥ್ ಪವಾರ್ ಮತ್ತು ಇನ್ನೊಬ್ಬರಿಗೆ ಹಾಕಿ ಗೌರವಿಸಿದರು. ಈ ನಡುವೆ ಡಾ ವಿಶ್ವನಾಥ್ ಪವಾರ್ ಅವರು ಅಶೋಕ ಅವರ ಹಣೆಗೆ ಕುಂಕುಮ ಇಡಲು ಮುಂದಾಗಿದ್ದಾರೆ. ಆದರೆ ಅಶೋಕ ಅವರು ಕುಂಕುಮ ಹಚ್ಚದಂತೆ ತಡೆದಿದ್ದಾರೆ. ಬಳಿಕ ವಿಶ್ವನಾಥ್ ಶಾಲು ಹಾಕಿ ಸನ್ಮಾನಿಸಿದರು.
ಬಿಜೆಪಿ ‘ಜೈ ಶ್ರೀರಾಮ್’ ಎಂದು ಕೂಗಿದರೆ ನಾನು ‘ಜೈ ಸೀತಾರಾಮ್’ ಎಂದು ಕೂಗುತ್ತೇನೆ : ಸಿಎಂ ಸಿದ್ದರಾಮಯ್ಯ
ಈ ಹಿಂದೆ ಸದನದಲ್ಲಿ ತಮ್ಮನ್ನು ಹೊಗಳುವ ಭರದಲ್ಲಿ ಬಿಜೆಪಿಯನ್ನು ಬೆಂಬಲಿಸುವ ಬಜರಂಗದಳದ ಕಾರ್ಯಕರ್ತರ ವಿರುದ್ಧ “ನಾನು ಗೃಹಸಚಿವ ಆಗಿದ್ದಾಗ ಪಬ್ನಲ್ಲಿ ಗಲಾಟೆ ಆದಾಗ ಗೂಂಡಾ ಕಾಯ್ದೆ ಹಾಕಿದ್ದೆ” ಎಂದು ಹೇಳಿದ್ದರು. ಆ ಮೂಲಕ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತಿದ್ದ ಅವರು ಬಜರಂಗದಳ ಕಾರ್ಯಕರ್ತರ ಕ್ಷಮೆ ಕೇಳಿದ್ದರು. ಇದೀಗ ಕುಂಕುಮ ಹಣೆಗೆ ಇಡಲು ನಿರಾಕರಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.