ಉಡುಪಿ : ಪ್ರೇಮಿಗಳ ದಿನಾಚರಣೆ ದಿನದಂದೇ ಉಡುಪಿಯಲ್ಲಿ ಹುಡುಗಿಯರಗೋಸ್ಕರ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಉಡುಪಿ ಜಿಲ್ಲೆಯ ಮಣಿಪಾಲ್ ನಲ್ಲಿ ವಿದ್ಯಾರ್ಥಿಗಳ ಮಧ್ಯ ಮಾರಾಮಾರಿ ನಡೆದಿರುವ ಘಟನೆ ವರದಿಯಾಗಿದೆ.
ಹೌದು ಹುಡುಗಿಯರ ವಿಚಾರಕ್ಕೆ ಹೊಡೆದಾಡಿಕೊಂಡ ವಿದ್ಯಾರ್ಥಿಗಳು. ಉಡುಪಿ ತಾಲೂಕಿನ ಮಣಿಪಾಲದಲ್ಲಿ ಹುಡುಗಿಯರ ವಿಚಾರಕ್ಕೆ ವಿದ್ಯಾರ್ಥಿಗಳ ಮಧ್ಯ ಮಾರಾಮಾರಿ ನಡೆದಿದೆ. ಮಣಿಪಾಲನ ಕಾಯಿನ್ ವೃತ್ತದ ಬಳಿಯ ಬಾರ್ ಮುಂದೆ ನಿನ್ನೆ ಈ ಒಂದು ಗಲಾಟೆ ನಡೆದಿದೆ.ಗಲಾಟೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ. ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.