ಕೊಚ್ಚಿ: ಗುಂಡಿಗಳಿಂದ ಉಂಟಾಗುವ ಪ್ರತಿಯೊಂದು ರಸ್ತೆ ಅಪಘಾತಕ್ಕೂ ಜಿಲ್ಲಾಧಿಕಾರಿ (ಡಿಎಂ) ಜವಾಬ್ದಾರರಾಗಿರುತ್ತಾರೆ ಎಂದು ಕೇರಳ ಹೈಕೋರ್ಟ್ ಹೇಳಿದೆ. ಇದನ್ನು ತಡೆಗಟ್ಟಲು, ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಿಗೆ ಪ್ರತಿ ರಸ್ತೆಗೆ ಭೇಟಿ ನೀಡುವಂತೆ ಡಿಎಂ ನಿರ್ದೇಶಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
“ಇಂತಹ ಅಪಘಾತಗಳನ್ನು ತಡೆಗಟ್ಟುವಲ್ಲಿ ಭಾರತ ಸರ್ಕಾರ ಮತ್ತು ವಿಶೇಷವಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಿಶೇಷ ಪಾತ್ರವನ್ನು ವಹಿಸುತ್ತದೆ” ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಪ್ರಕರಣದ ವಿಚಾರಣೆಯ ಸಮಯದಲ್ಲಿ ಹೇಳಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಯಾರಾದರೂ ಗಾಯಗೊಂಡರೆ ಅಥವಾ ಸಾವನ್ನಪ್ಪಿದರೆ, ಅದನ್ನು ಸಾಂವಿಧಾನಿಕ ದೌರ್ಜನ್ಯವೆಂದು ಪರಿಗಣಿಸಬೇಕು. ಈ ನಿಟ್ಟಿನಲ್ಲಿ ತನ್ನ ನಿಲುವನ್ನು ವಿವರಿಸುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಹೆಚ್ಚಿನ ಸಂದರ್ಭಗಳಲ್ಲಿ, ಕೆಟ್ಟ ರಸ್ತೆಗಳಿಗೆ ಮುಖ್ಯ ಕಾರಣ ಭ್ರಷ್ಟಾಚಾರ ಅಥವಾ ನಿರ್ಲಕ್ಷ್ಯ ಎಂದು ನ್ಯಾಯಾಲಯ ಹೇಳಿದೆ. ಯಾರಾದರೂ ಭ್ರಷ್ಟರಾಗಿದ್ದರೆ, ಇನ್ನೊಬ್ಬರು ಸಾಯುತ್ತಾರೆ. ನಾನು ಅದನ್ನು ಸಂಭವಿಸಲು ಬಿಡ ಬಾರದು ಅಂತ ನ್ಯಾಯಫೀಠ ಹೇಳಿದೆ.