ಬೆಂಗಳೂರು : ಸಾರ್ವತ್ರಿಕ ರಜಾ ದಿನಗಳೂ ಒಳಗೊಂಡಂತೆ ಎಲ್ಲ ದಿನಗಳಲ್ಲಿಯೂ ಅಧಿಕಾರಿಗಳು ತಪ್ಪದೆ ಕೇಂದ್ರ ಸ್ಥಾನದಲ್ಲಿರಬೇಕು ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಜಿಲ್ಲಾಧಿಕಾರಿಗಳು ಕೆಲವು ಬಾರಿ ಜಿಲ್ಲಾ ಮತ್ತು ತಾಲ್ಲೂಕು ಸ್ಥಳಗಳಲ್ಲಿ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರದೆ, ಕೇಂದ್ರ ಬಿಟ್ಟು ತೆರಳುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ. ಒಂದು ವೇಳೆ ಸರ್ಕಾರಿ ಕೆಲಸ ಕಾರ್ಯ ನಿಮಿತ್ತ ಅಥವಾ ತುರ್ತು ವೈಯಕ್ತಿಕ ಕಾರ್ಯಗಳಿಗೆ ಕೇಂದ್ರ ಸ್ಥಾನ ಬಿಡುವ ಸಂದರ್ಭಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು, ತಪ್ಪಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ರಾಜ್ಯ ಸರ್ಕಾರ ತಿಳಿಸಿದೆ.








