ಬೆಂಗಳೂರು : ಬೆಂಗಳೂರಲ್ಲಿ ಗಣೇಶ ಉತ್ಸವ ವೇಳೆ ಬೆಚ್ಚಿ ಬೀಳಿಸಿದ್ದ ಸರಗಳ್ಳನನ್ನ ಇದೀಗ ಅರೆಸ್ಟ್ ಮಾಡಲಾಗಿದೆ. ಸರಗಳ್ಳ ಕೆಂಗೇರಿಯ ಪ್ರವೀಣನ್ನು ಇದೀಗ ಗಿರಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಮನಗರ ಮೂಲದ ಮತ್ತೋರ್ವ ಕಳ್ಳ ಯೋಗಾನಂದಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸೆಪ್ಟೆಂಬರ್ 14ರ ರಾತ್ರಿ 5 ಕಡೆ ಪ್ರವೀಣ್ ಮತ್ತು ಯೋಗಾನಂದ ಸರಗಳು ತರ ಮಾಡಿದ್ದರು. ಗಿರಿನಗರ, ಹನುಮಂತನಗರ ಕೋಣನಕುಂಟೆಯಲ್ಲಿ ಸರಗಳ್ಳತನ ಮಾಡಿದ್ದರು. ಮಹಿಳೆಯರ ಕುತ್ತಿಗೆಗೆ ಲಾಂಗ್ ಇಟ್ಟು ದುಷ್ಟರು ಸರಗಳ್ಳತನ ಮಾಡಿದ್ದರು. ಈ ವೇಳೆ ಮಹಿಳೆ ಒಬ್ಬರು ವಿರೋಧ ವ್ಯಕ್ತಪಡಿಸಿದಕ್ಕೆ ಮಹಿಳೆ ಮೇಲೆ ಲಾಂಗ್ ಬೀಸಿದ್ದರು.
ಸರಗಳ ಲಾಂಗ್ ಏಟಿಗೆ ಮಹಿಳೆಯ ಕೈಬೆರಳು ತುಂಡಾಗಿದ್ದವು. ಇದೀಗ ಗಿರಿನಗರಠಾಣೆ ಪೊಲೀಸರು ಪ್ರವೀಣ್ ನನ್ನ ಅರೆಸ್ಟ್ ಮಾಡಲಾಗಿದೆ. ಪ್ರವೀಣ್ ಅನ್ನು ಬಂಧಿಸುತ್ತಿದ್ದಂತೆ ಯೋಗಾನಂದ ಪರಾರಿ ಆಗಿದ್ದಾನೆ. ಸೆಂಟ್ರಲ್ ರೈಲಿನಲ್ಲಿ ಪ್ರವೀಣ್ ಮತ್ತು ಯೋಗಾನಂದ ಪರಸ್ಪರ ಪರಿಚಯವಾಗಿದ್ದಾರೆ. ಜೈಲಿನಿಂದ ಹೊರಬಂದ ನಂತರವೂ ಇಬ್ಬರೂ ಸರಗೊಳ್ಳತನ ಮುಂದುವರಿಸಿದರು.