ಬೆಂಗಳೂರು : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ 50 ಕೋಟಿ ರೂಪಾಯಿ ಆರೋಪ ಕೇಳಿಬಂದಿದ್ದು, ಈ ಕುರಿತು ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ನಿನ್ನೆ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಉದ್ಯಮಿ ವಿಜಯ್ ತಾತಾ FIR ದಾಖಲಿಸಿದ್ದಾರೆ. ಈ ಕುರಿತಂತೆ ಅಮೃತಹಳ್ಳಿ ಠಾಣೆಯ ಪೊಲೀಸರು ಉದ್ಯಮಿ ವಿಜಯ್ ತಾತಾಗೆ ಆರೋಪ ಮಾಡಿರುವ ಕುರಿತು ದಾಖಲೆ ನೀಡಿ ಎಂದು ನೋಟಿಸ್ ನೀಡಿದ್ದಾರೆ.
ಹೌದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಆರೋಪಿಸಿ ದೂರಿನ ಸಂಬಂಧ ದಾಖಲೆ ಒದಗಿಸುವಂತೆ ವಿಜಯ್ ತಾತಾಗೆ ಅಮೃತ ಹಳ್ಳಿಯ ಪೊಲೀಸರು ದಾಖಲೆ ಒದಗಿಸುವಂತೆ ನೋಟಿಸ್ ನೀಡಿದ್ದಾರೆ. ರಮೇಶ್ ಗೌಡ ಬಂದಿದ್ದ ಬಗ್ಗೆ ಟೆಕ್ನಿಕಲ್ ಎವಿಡೆನ್ಸ್ ಹಾಗೂ ಹಣ ಕೇಳಿದರ ಬಗ್ಗೆ ಏನಾದರೂ ದಾಖಲೆಗಳಿದ್ದರೆ ನೀಡುವಂತೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹಣ ಕೇಳಿರುವುದರ ಕುರಿತು ಪ್ರೂವ್ ಮಾಡುತ್ತೇನೆ
ಇನ್ನು ವಿಜಯ್ ತಾತಾ ಅವರು ಪ್ರಕರಣದ ಕುರಿತಂತೆ ನನ್ನ ವಿರುದ್ಧ 100 ಕೋಟಿ ರೂಪಾಯಿ ಆರೋಪ ಕೇಳಿ ಬಂದಿದೆ. ಇಂತದಕ್ಕೆಲ್ಲ ಅರ್ಥ ಬೇಡ್ವಾ? ಕೇಂದ್ರ ಸಚಿವರ ಹತ್ತಿರ ನಾನು 100 ಕೋಟಿ ಕೇಳುವುದಕ್ಕೆ ಸಾಧ್ಯನಾ? ಸ್ವಲ್ಪ ಆದ್ರೂ ಕಾಮನ್ ಸೆನ್ಸ್ ಇದೆಯಾ ಇಂತ ಹೇಳಿಕೆ ಕೊಡೋದಕ್ಕೆ ಎಂದು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಉದ್ಯಮಿ ವಿಜಯ್ ತಾತಾ ಆಕ್ರೋಶ ಹೊರಹಾಕಿದ್ದಾರೆ.
ನಾನು 50 ಕೋಟಿ ಕೇಳಿದ್ದಾರೆ ಅಂತ ಪ್ರೂವ್ ಮಾಡುತ್ತೇನೆ.ನಮ್ಮ ಮನೆಗೆ ಬಂದು 50 ಕೋಟಿ ಕೇಳಿದ್ದಾರೆ ಅಂತ ನಾನು ದಾಖಲೆ ಸಮೇತ ಪ್ರೋವ್ ಮಾಡುತ್ತೇನೆ. ಅವರು ನಾನು 100 ಕೋಟಿ ಕೇಳಿದ್ದೇನೆ ಅಂತ ಪ್ರೋವ್ ಮಾಡ್ತಾರಾ? ನೀವು ಕಾರ್ಯಕರ್ತರನ್ನು ಬೆಳೆಸುವ ಕೆಲಸ ಮಾಡಿ ಕಾರ್ಯಕರ್ತರನ್ನು ಬಳಸಿಕೊಂಡು ಬಿಸಾಡಬೇಡಿ ಎಂದು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಉದ್ಯಮಿ ವಿಜಯ್ ತಾತ ಆಕ್ರೋಶ ಹೊರಹಾಕಿದ್ದಾರೆ.