ಬೆಂಗಳೂರು : ಕಾಂತರಾ ಚಾಪ್ಟರ್ 1 ಪಾತ್ರದ ಬಗ್ಗೆ ಬಾಲಿವುಡ್ ರಣವೀರ್ ಸಿಂಗ್ ವಿರುದ್ಧ ದಾಖಲಾಗಿರುವ FIR ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇಂದು ಹೈಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ದೂರುದಾರ ವಕೀಲ ಪ್ರಶಾಂತ್ ಮೆತಲ್ ರಣವೀರ್ ಸಿಂಗ್ ಚಾವುಂಡಿ ಬೆಟ್ಟಕ್ಕೆ ಭೇಟಿ ನೀಡಿ ಕ್ಷಮೆ ಕೇಳಬೇಕು ಎಂದು ವಾದಿಸಿದರು.
ವಿಚಾರಣೆ ಸಂದರ್ಭದಲ್ಲಿ ತಮ್ಮ ಹೇಳಿಕೆಗೆ ಕ್ಷಮೆ ಕೋರಿ ರಣವೀರ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಎಂದು ಹೇಳಿದ್ದಾರೆ. ಅಲ್ಲದೆ ತಾವು ಕ್ಷಮೆ ಕೇಳಿದ ಕ್ಷಮಾಪಣಾ ಪ್ರಮಾಣ ಪತ್ರವನ್ನು ಕೋರ್ಟಿಗೆ ಸಲ್ಲಿಸುತ್ತೇನೆ ಎಂದಿದ್ದಾರೆ. ಚಾವುಂಡಿ ದೇವಾಲಯಕ್ಕೂ ಭೇಟಿ ನೀಡಿ ರಣವೀರ್ ಸಿಂಗ್ ಕ್ಷಮೆ ಕೇಳಬೇಕು. ನೈಜ ಪಶ್ಚಾತಾಪ ಇರಬೇಕು ಎಂದು ದೂರುದಾರ ಪ್ರಶಾಂತ ಮೆತಲ್ ವಾದ ಮಂಡಿಸಿದರು.
ಈ ವೇಳೆ ಬಾಲಿವುಡ್ ನಟ ರಣವೀರ ಸಿಂಗ್ ಪರ ವಕೀಲರು, ದೇವಾಲಯಕ್ಕೆ ರಣವೀರ್ ಸಿಂಗ್ ಭೇಟಿ ನೀಡುತ್ತಾರೆ ಕ್ಷಮೆ ಕೇಳುತ್ತಾರೆ ಸಲ್ಲಿಸುವುದಾಗಿ ನಟ ರಣವೀರ್ ಸಿಂಗ್ ಪರ ವಕೀಲರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ಬಳಿಕ ಹೈಕೋರ್ಟ್ ಏಕ ಸದಸ್ಯ ಪೀಠ ಈ ಒಂದು ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 10 ಕ್ಕೆ ಮುಂದೂಡಿತು.








