ಕಲಬುರ್ಗಿ : ಕಳೆದ ಎರಡು ದಿನಗಳಿಂದ ಕಲ್ಬುರ್ಗಿ ಯಾದಗಿರಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದೆ ಇದರಿಂದ ಜನಜೀವನ ಸಂಪೂರ್ಣವಾಗಿಅಸ್ತವೆಸ್ತಗೊಂಡಿದ್ದು, ಭಾರಿ ಮಳೆಯಿಂದಾಗಿ ಮಳಖೇಡದಲ್ಲಿನ ಉತ್ತರಾದಿಮಠ ಇದೀಗ ಜಲಾವೃತವಾಗಿದೆ.
ಹೌದು ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿರುವ ಮಳಖೇಡ ಗ್ರಾಮದಲ್ಲಿರುವ ಉತ್ತರಾದಿಮಠದ ಜಯತೀರ್ಥರ ಮೂಲ ಬೃಂದಾವನ ಭಾರಿ ಮಳೆ ಸುರಿದ ಪರಿಣಾಮ ಮಠ ಇದೀಗ ಜಲಾವೃತವಾಗಿದೆ. ಕಳೆದ ಎರಡು ದಿನಗಳಿಂದ ಕಲಬುರ್ಗಿ ಜಿಲ್ಲೆಯಾದ್ಯಂತ ಭಾರಿ ಮಳೆ ಆಗುತ್ತಿದೆ. ಭಾರಿ ಮಳೆಯಿಂದಾಗಿ ಕಾಗಿಣ ನದಿ ಉಕ್ಕಿ ಹರಿಯುತ್ತಿದ್ದು, ಕಾಗಿಣ ನದಿ ಬಳಿಯ ಉತ್ತರಾದಿಮಠಕ್ಕೂ ನದಿಯ ನೀರು ನುಗ್ಗಿದೆ. ಉತ್ತರಾದಿ ಮಠದ ಜಯತೀರ್ಥರ ಮೂಲ ಬೃಂದಾವನ ಜಲಾವೃತವಾಗಿದೆ.