*ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಂಸ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ನಡುವೆ ಹಲವು ಮಂದಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರ ಬ್ಯಾಟ್ ಬೀಸಿದ್ದು, ಮಾಂಸ ತಿಂದು ದೇವಸ್ಥಾನಕ್ಕೆ ಹೋದರೆ ತಪ್ಪು ಏನು ಅಂತ ಪ್ರಶ್ನೆ ಮಾಡುತ್ತಿದ್ದಾರೆ.
ರಾಜ್ಯದ ಬಹು ಸಂಖ್ಯಾತ ಮಂದಿಯ ಆಹಾರದಲ್ಲಿ ಮಾಂಸಹಾರವಿದ್ದು, ಹಲವು ಜಾತ್ರೆ, ಹಬ್ಬದ ಹರಿದಿನದಲ್ಲಿ ಮಾಂಸವನ್ನು ತಿಂದ ಬಳಿಕ ದೇವಸ್ಥಾನಕ್ಕೆ ತೆರಳಿ ಆರತಿಯನ್ನು ಅರ್ಪಿಸುವ, ಇಲ್ಲವೇ ಪೂಜೆ ಸಲ್ಲಿಸುವ ಪದ್ದತಿ ಕೂಡ ಇದೇ, ಆದರೆ ಕೆಲವು ಮಂದಿ ಸಿದ್ದರಾಮಯ್ಯ ಅವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ ಎನ್ನುವುದನ್ನೆ ದೊಡ್ಡ ಗಲಾಟೆ ಮಾಡುತ್ತಿದ್ದಾರೆ ಅಂಥ ಆರೋಪಿಸಿದ್ದಾರೆ.
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮಾಂಸಹಾರಿಗಳಿಗೆ ದೇವಸ್ಥಾನ ಪ್ರವೇಶ ನಿಷಿದ್ಧ ಮಾಡಲಿ ಅನ್ನೋ ಸವಾಲಿನ ಪೋಸ್ಟ್ಗಳು ಕೂಡ ವೈರಲ್ ಆಗಿದ್ದು, ಒಂದು ವೇಳೇ ಹೀಗೆ ಮಾಡಿದ್ರೆ ರಾಜ್ಯದ ನೂರಾರು ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗುವುದರಲ್ಲಿ ಅನುಮಾನ ಇಲ್ಲ ಅಂತ ಹೇಳುತ್ತಿದ್ದಾರೆ.
ಒಂದು ವೇಳೆ ಮಾಂಸ ಹಾರಿಗಳು ದೇವಸ್ಥಾನಕ್ಕೆ ಬರಬಾರದು ಅಂತ ಬೋರ್ಡ್ ಹಾಕಿದ್ರೆ ಆಗ ದೇವಾಲಯಗಳ ಪರಿಸ್ಥಿತಿ ಹೇಗೆ ಇರಬೇಡ ಅನ್ನೋದನ್ನು ಯೋಚನೆ ಮಾಡಿ ಅಂತ ಹಲವು ಮಂದಿ ಹೇಳುತ್ತಿದ್ದಾರೆ. ಇದಲ್ಲದೇ ಯಾವ ದೇವರು ದೇವಸ್ಥಾನಕ್ಕೆ ಮಾಂಸವನ್ನು ತಿಂದು ಬರಬೇಡಿ ಅಂತ ಹೇಳಿದ್ದಾನೆ, ನಮ್ಮಲ್ಲಿ ಹಲವು ದೇವರುಗಳಿಗೆ ಮಾಂಸವನ್ನು ನೈವೆದ್ಯ ರೂಪದಲ್ಲಿ, ಎಡೆ ರೂಪದಲ್ಲಿ ಇಡುವ ಸಂಪ್ರದಾಯವಿದ್ದು, ಹಲವು ಭಾಗಗಳಲ್ಲಿ ದೇವರಿಗೆ ಭೂಮಿ ತಾಯಿಗೆ ಪ್ರಾಣಿಗಳನ್ನು ಬಲಿಕೊಟ್ಟ ಬಳಿಕ ಕೆಲಸಗಳನ್ನು ಮಾಡಲಾಗುತ್ತದೆ ಅಂಥ ಹೇಳುತ್ತಿದ್ದಾರೆ. ಬಹು ಸಂಖ್ಯಾತರು ಅದರಲ್ಲಿಯೂ ದ್ರಾವಿಡರ ಆಹಾರ ಪದ್ದತಿಯೇ ಮಾಂಸಹಾರವಾಗಿದ್ದು, ಅವರ ದೈವ ಪರಿಕಲ್ಪನೆಯಲ್ಲಿ ಮಾಂಸಹಾರದ ಊಟದ ಬಳಿಕ ದೇವಾಲಯಗಳಿಗೆ ತೆರಳಿ ದೇವರಿಗೆ ಪೂಜೆ ಮಾಡುವುದು, ಇಲ್ಲವೇ ಪ್ರಾಣಿಗಳ ಬಲಿಯನ್ನು ದೇವರಿಗೆ ಕೊಡುವುದು, ಬಳಿಕ ಅಂತಹ ಮಾಂಸವನ್ನು ದೇವರಿಗೆ ಎಡೆಯ ರೂಪದಲ್ಲಿ ಇಟ್ಟು ಪೂಜೆ ಮಾಡುವ ಸಂಪ್ರದಾಯವಿದೆ, ಅತಂಹ ನಿಯಮಗಳಿಗೆ ವಿರುದ್ದ ವ್ಯಕ್ತಪಡಿಸುತ್ತಿರುವುದರ ವಿರುದ್ದ ಈಗ ಟೀಕೆಗಳು ಕೇಳಿ ಬರುತ್ತಿದ್ದಾವೆ.