ಚಿತ್ರದುರ್ಗ : ಚಿತ್ರದುರ್ಗದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ಆಸ್ತಿಗಾಗಿ ಹೆತ್ತ ತಂದೆಯನ್ನೇ ನೀಚ ಮಕ್ಕಳು ಮನೆಯಿಂದ ಹೊರ ಹಾಕಿರುವ ಘಟನೆ ನಡೆದಿದೆ. ಈ ಹಿನ್ನೆಲೆ 82 ವರ್ಷದ ವೃದ್ಧರು ದೇವಸ್ಥಾನದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಹೌದು ಚಿತ್ರದುರ್ಗದ ಮಾಳಪ್ಪನಹಟ್ಟಿಯಲ್ಲಿ ಈ ಒಂದು ಅಮಾನವೀಯ ಕೃತ್ಯ ನಡೆದಿದೆ. ಆಸ್ತಿ ವಿವಾದ ಹಿನ್ನೆಲೆಯಲ್ಲಿ ಮಕ್ಕಳು ವಯಸ್ಸಾದ ತಂದೆಯನ್ನೇ ಹೊರಹಾಕಿದ್ದಾರೆ. ನೆಲೆ ಇಲ್ಲದೆ 82 ವರ್ಷದ ವೃದ್ಧ ಬಸಪ್ಪ ಪರದಾಡುತ್ತಿದ್ದು, ಮಕ್ಕಳಾದ ಹನುಮಂತಪ್ಪ ಮತ್ತು ಜಯಪ್ಪ ವಿರುದ್ಧ ಗಂಭೀರವಾದ ಆರೋಪ ಕೇಳಿ ಬಂದಿದೆ. ಹಲವು ವರ್ಷಗಳಿಂದ ಬಸಪ್ಪ ವೃದ್ಧಾಶ್ರಮದಲ್ಲಿ ಇದ್ದರು.
ತಂದೆ ಮನೆಯ ಬಳಿ ತೆರಳಿದರೂ ಕೂಡ ಮಕ್ಕಳು ತಂದೆಯನ್ನು ಮನೆಯಲ್ಲಿ ಸೇರಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವೃದ್ಧ ಬಸಪ್ಪ ಅವರು ಕಳೆದ 8-10 ವರ್ಷಗಳಿಂದ ಮನೆಯಿಂದ ಹೊರಗಡೆ ಇದ್ದೇನೆ. ಯಾರಾದರೂ ಅನ್ನ ಕೊಟ್ಟರೆ ಊಟ ಮಾಡುತ್ತೇನೆ. ಇಲ್ಲವಾದರೆ ಭಿಕ್ಷೆ ಬೇಡಿ ಜೀವಿಸುತಿದ್ದೇನೆ. ನನಗೆ ಸರಿಯಾಗಿ ಕಣ್ಣು ಸಹ ಕಾಣುವುದಿಲ್ಲ ಏನ್ ಮಾಡೋದು ಮಕ್ಕಳು ಅಸ್ತಿಗಾಗಿ ಹೊರಹಾಕಿದ್ದಾರೆ ಎಂದು ಬಸಪ್ಪ ಮಾಧ್ಯಮಗಳಿಗೆ ತಿಳಿಸಿದರು.








