ತುಮಕೂರು : ನಿನ್ನೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಾತಿಗಣತಿ ವರದಿ ಕುರಿತು ವಿಶೇಷ ಸಂಪುಟ ಸಭೆ ನಡೆಯಿತು.ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲಿ ಕೈಗೊಂಡ ಮಾನದಂಡಗಳ ವಿವರಗಳನ್ನು ಸ್ವಲ್ಪ ಮಟ್ಟಿಗೆ ಚರ್ಚಿಸಲಾಗಿದ್ದು, ಚರ್ಚೆ ಅಪೂರ್ಣವಾಗಿರುವುದರಿಂದ ಮುಂದಿನ ಸಚಿವ ಸಂಪುಟ ಸಭೆ ಏಪ್ರಿಲ್ 24 ರಂದು ಮಲೆಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿದ್ದು, ಆಯಾ ಭಾಗದ ವಿಷಯಗಳು ಹೆಚ್ಚಾಗಿ ಚರ್ಚೆಗೆ ಬರುತ್ತದೆ. ಮೇ 2 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲು ಸಚಿವ ಸಂಪುಟ ನಿರ್ಧರಿಸಿದೆ.
ಇನ್ನು ಈ ವಿಚಾರವಾಗಿ ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಮಾತನಾಡಿದ್ದು, ಸಮೀಕ್ಷೆ ಮಾಡೋಕೆ ಮಠಕ್ಕೆ ಯಾರೂ ಬಂದಿಲ್ಲ ಇಲ್ಲಿ ಯಾರನ್ನ ಕೇಳಿದರೂ ಗೊತ್ತಿಲ್ಲ ಅಂತ ಹೇಳುತ್ತಿದ್ದಾರೆ. ಲಿಂಗಾಯತರಲ್ಲೂ ಕೂಲಿ ಮಾಡುವ ಜನರು ಇದ್ದಾರೆ ಇವತ್ತು ಬಡವರು ಯಾವ ಸಮಾಜದಲ್ಲಿ ಇಲ್ಲ ಹೇಳಿ? 10 ವರ್ಷ ಹಿಂದಿನ ಜಾತಿಯ ಗಣತಿ ಅದನ್ನ ಮಾಡದಂಡವಾಗಿ ಇಟ್ಟುಕೊಳ್ಳಬೇಕಾಗುತ್ತದೆ. 10 ವರ್ಷದ ಹಿಂದಿನ ಜಾತಿಗಣತಿಯನ್ನು ಜಾರಿಗೆ ತರುವುದು ಸರಿಯಲ್ಲ. ಹೊಸದಾಗಿ ಸಮೀಕ್ಷೆ ಮಾಡಿ ಕ್ರಮ ಕೈಗೊಂಡರೆ ಸ್ವಾಗತ ಗೌತಮಕೂರಿನಲ್ಲಿ ಸಿದ್ದಗಂಗಾ ಶ್ರೀಗಳು ಪ್ರತಿಕ್ರಿಯೆ ನೀಡಿದರು.
ಯಾರನ್ನೇ ಕೇಳಿದರೂ ನಮ್ಮ ಬಳಿ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ನ್ಯಾಯಯುತವಾಗಿ ಸಮೀಕ್ಷೆ ನಡೆಸುವುದು ಸರ್ಕಾರದ ಕರ್ತವ್ಯವಾಗಿದೆ ಎಲ್ಲಾ ಸಮಾಜದಲ್ಲಿರುವ ಬಡವರಿಗೆ ಅನುಕೂಲವಾಗುವಂತಹ ಕೆಲಸ ಮಾಡಿ. ಜಾತಿವಾರು ಜನಸಂಖ್ಯೆ ಜಾಸ್ತಿ ಇರಬಹುದು ಅಥವಾ ಕಡಿಮೆ ಇರಬಹುದು. ಲಿಂಗಾಯತ ಸಮುದಾಯದಲ್ಲೂ ದಿನಗೂಲಿ ಮಾಡುವಂತಹ ಜನರು ಇದ್ದಾರೆ. 10 ವರ್ಷದ ಹಿಂದಿನ ಜಾತಿಗಣತಿ ವರದಿ ಎಂದು ಅವರೇ ಹೇಳುತ್ತಿದ್ದಾರೆ. 10 ವರ್ಷದಿಂದ ಎಷ್ಟೋ ಬದಲಾವಣೆ ಆಗಿರಬಹುದು 10 ವರ್ಷದ ಹಿಂದಿನ ವರದಿಯನ್ನು ಈಗ ಜಾರಿಗೆ ತರುವುದು ಸರಿಯಲ್ಲ. ಹೊಸದಾಗಿ ಸಮೀಕ್ಷೆ ಮಾಡಿ ಕ್ರಮ ಕೈಗೊಂಡರೆ ಎಲ್ಲರೂ ಸ್ವಾಗತಿಸುತ್ತಾರೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ ನೀಡಿದರು.