ಬೆಂಗಳೂರು : ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಫೈರಿಂಗ್ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದಾನೆ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಜಿ. ಪರಮೇಶ್ವರ್, ಬಳ್ಳಾರಿ ಗಲಾಟೆ ಪ್ರಕರಣ ಸಿಬಿಐ ಗೆ ಕೊಡುವ ಅಗತ್ಯ ಇಲ್ಲ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ಪೊಲೀಸರಿಗೆ ತನಿಖೆ ಮಾಡುವ ಸಾಮರ್ಥ್ಯ ಇದೆ ನಮ್ಮ ಪೊಲೀಸರು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ. ಅವರಿಂದ ಇದರ ತನಿಖೆ ಆಗಲ್ಲ ಅನ್ನೋ ಸಂದರ್ಭ ಬಂದಾಗ ಸಿಬಿಐ ತನಿಖೆಯ ಮತ್ತೊಂದು ಅಂತ ನೋಡಬಹುದು. ಇಂತಹ ಪ್ರಕರಣಗಳು ಸಿಬಿಐಗೆ ಕೊಡಲ್ಲ ಅಂತ ಸಚಿವ ಸಂಪುಟ ಸಭೆಯಲ್ಲಿ ಈ ಹಿಂದೆಯೇ ತೀರ್ಮಾನಿಸಿದ್ದೇವೆ.
ಕೆಲವು ಪ್ರಕರಣಗಳಲ್ಲಿ ಸೆಲೆಕ್ಟಿವ್ ನಿರ್ಧಾರ ಮಾಡುತ್ತೇವೆ ನ್ಯಾಯಾಲಯದಿಂದ ಆದೇಶ ಬಂದಾಗ ಅಥವಾ ಇನ್ಯಾವುದೋ ಸನ್ನಿವೇಶ ಬಂದಾಗಷ್ಟೇ ಸಿಬಿಐ ಗೆ ಕೊಡುವ ಬಗ್ಗೆ ತೀರ್ಮಾನಿಸಲಾಗುತ್ತದೆ. ಹಾಗಾಗಿ ಬಳ್ಳಾರಿ ಗಲಾಟೆ ಪ್ರಕರಣವನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ ಎಂದು ತಿಳಿಸಿದರು.








