ತೆಲಂಗಾಣ : ಖ್ಯಾತ ಗಾಯಕಿ ಮಂಗ್ಲಿ ಅವರ ಬರ್ತಡೆ ಪಾರ್ಟಿ ಮೇಲೆ ನಿನ್ನೆ ಪೊಲೀಸರು ದಾಳಿ ನಡೆಸಿದ್ದರು. ಪಾರ್ಟಿಯಲ್ಲಿ ಮಾದಕ ದ್ರವ್ಯ ಮತ್ತು ಗಾಂಜಾ ಸೇವಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದರು. ಇದೀಗ ವಿಡಿಯೋ ಮೂಲಕ ಮಂಗ್ಲಿ ಸ್ಪಷ್ಟನೆ ನೀಡಿದ್ದು ಬರ್ತಡೆ ಪಾರ್ಟಿಯಲ್ಲಿ ಯಾವುದೇ ಮಾದಕ ದ್ರವ್ಯ ಬಳಸಿಲ್ಲ. ಸ್ಥಳೀಯ ಮದ್ಯ ಮಾತ್ರ ಹಂಚಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
ಗಾಯಕಿ ಮಂಗ್ಲಿ ಬರ್ತಡೆ ಪಾರ್ಟಿಯಲ್ಲಿ ಗಾಂಜಾ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆವೆಲ್ಲ ಠಾಣೆಯ ಪೊಲೀಸರ ದಾಳಿಯ ಬಳಿಕ ಗಾಯಕಿ ಮಂಗ್ಲಿ ಸ್ಪಷ್ಟನೇ ನೀಡಿದ್ದಾರೆ. ನನ್ನ ಬರ್ತಡೇ ಪಾರ್ಟಿಯಲ್ಲಿ ನನ್ನ ಆತ್ಮೀಯ ಗೆಳೆಯ ಗೆಳತಿಯರು ನನ್ನ ತಂಡದ ಸದಸ್ಯರು ಹಾಗೂ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಮದ್ಯ, ಸೌಂಡ್ ಸಿಸ್ಟಮಗೆ ಅನುಮತಿ ಪಡೆಯುವ ಬಗ್ಗೆ ಗೊತ್ತಿರಲಿಲ್ಲ. ಯಾರಾದರೂ ಮಾರ್ಗದರ್ಶನ ನೀಡಿದ್ರೆ ನಾನು ಈ ತಪ್ಪು ಮಾಡುತ್ತಿರಲಿಲ್ಲ. ಪಾರ್ಟಿಯಲ್ಲಿ ಯಾವುದೇ ಡ್ರಗ್ಸ್ ಬಳಸಿಲ್ಲ ಸ್ಥಳೀಯ ಮದ್ಯ ಮಾತ್ರ ಹಂಚಲಾಗಿತ್ತು.
ಪರೀಕ್ಷೆ ನಡೆಸಲಾಗಿದ್ದ ವ್ಯಕ್ತಿ ಬೇರೆಡೆ ಮಾದಕ ದ್ರವ್ಯ ಸೇವಿಸಿ ಬಂದಿದ್ದ. ಆದರೆ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವಿಸಿರಲಿಲ್ಲ. ಬರ್ತಡೆ ಪಾರ್ಟಿಯಲ್ಲಿ ಯಾವುದೇ ವಿದೇಶಿ ಮದ್ಯ ಇರಲಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ದಯವಿಟ್ಟು ಯಾವುದೇ ಆರೋಪಗಳನ್ನು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಗಾಯಕಿ ಮಂಗಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಎರ್ಲಪಲ್ಲಿಯಲ್ಲಿರುವ ತ್ರಿಪುರ ರೆಸಾರ್ಟ್ ಮೇಲೆ ನಿನ್ನೆ ಪೊಲೀಸರು ದಾಳಿ ಮಾಡಿದ್ದರು. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲ ತಾಲೂಕಿನ ಎಲ್ಲಾಪಲ್ಲಿ ಎಂಬಲ್ಲಿ ದಾಳಿ ನಡೆಸಿದರು. ವೈದ್ಯಕೀಯ ಪರೀಕ್ಷೆಯಲ್ಲಿ ಗಾಯಕಿ ಮಂಗ್ಲಿ ಡ್ರಗ್ಸ್ ಸೇವಿಸಿಲ್ಲ ಎಂಬುದು ಅಧಿಕೃತ ಆಗಿದೆ.