ಚಿತ್ರದುರ್ಗ : ಈಗಾಗಲೇ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಪವರ್ ಶೇರಿಂಗ್ ಕುರಿತು ಕಾಂಗ್ರೆಸ್ ನಾಯಕರು ಹಲವಾರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ಮಧ್ಯ ಆಗಾಗ ದಲಿತ ಸಿಎಂ ಕೂಗು ಕೂಡ ಕೇಳಿ ಬರುತ್ತದೆ. ಇದೀಗ ಪಿಡಬ್ಲ್ಯೂಡಿ ಸಚಿವರಾದಂತಹ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಜಾತ್ರೆಯಲ್ಲಿ ಬಾಳೆಹಣ್ಣಿನ ಮೇಲೆ ನೆಕ್ಸ್ಟ್ ಸಿಎಂ ಸತೀಶ್ ಜಾರಕಿಹೊಳಿ ಎಂದು ಬರೆದು ರಥೋತ್ಸವಕ್ಕೆ ಎಸೆದು ಘೋಷಣೆ ಕೂಗಿದ್ದಾರೆ.
ಹೌದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಜಾತ್ರೆಯಲ್ಲಿ ಅಭಿಮಾನಿಗಳಿಂದ ಸತೀಶ್ ಜಾರಕಿಹೊಳಿ ನೆಕ್ಸ್ಟ್ ಸಿಎಂ ಎಂದು ಘೋಷಣೆ ಕೂಗಲಾಯಿತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಫೋಟೋ ಪ್ರದರ್ಶಿಸಿ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಅಲ್ಲದೆ ಬಾಳೆಹಣ್ಣಿನ ಮೇಲೆ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂದು ಬರೆದು ರಥದ ಮೇಲೆ ಬಾಳೆಹಣ್ಣು ಎಸೆದಿದ್ದಾರೆಸಚಿವ ಸತೀಶ್ ಬೆಂಬಲಿಗರು.
ಸ್ವೀಟ್ ಕಾರ್ನ್ ಗಾಡಿಗೆ ಬೆಂಕಿ
ಇದೇ ಒಂದು ನಾಯಕನಹಟ್ಟಿ ಜಾತ್ರೆಯಲ್ಲಿ ರಥೋತ್ಸವದ ವೇಳೆ ಏಕಾಏಕಿ ಸ್ವೀಟ್ ಕಾರ್ನ್ ಗಾಡಿಗೆ ಬೆಂಕಿ ತಗುಲಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಸ್ವೀಟ್ ಕಾರ್ನ್ ಗಾಡಿ ಹೊತ್ತಿ ಉರಿದಿದೆ. ತಕ್ಷಣ ಅಲ್ಲಿದ್ದ ಭಕ್ತಾದಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಕೂಡಲೇ ಜಾತ್ರೆಯ ಸೇವಾ ಕಾರ್ಯಕರ್ತರು ಗಾಡಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ತಮ್ಮ ಸಮಯ ಪ್ರಜ್ಞೆಯಿಂದ ಆರಿಸಿದ್ದಾರೆ. ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ಒಂದು ತಪ್ಪಿದೆ.