ಮೈಸೂರು : ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದ ಕುರಿತಂತೆ, ಚಾರ್ಜ್ ಶೀಟ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಅವರ ಹೆಸರು ಉಲ್ಲೇಖಿಸಿರುವ ವಿಚಾರವಾಗಿ, ದೇಣಿಗೆ ಕೊಡುವುದು ತಪ್ಪಾ? ದೇಣಿಗೆ ಕೊಡುವುದು ತಪ್ಪೇನಿಲ್ಲ ಎಂದು ಮೈಸೂರು ಜಿಲ್ಲೆಯ ಕೆ ಆರ್ ನಗರದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕಡಿವಾಣ ಹಾಕಬೇಕಿದೆ. ಕೇಂದ್ರ ಸರ್ಕಾರ ಟೆಸ್ಟಿಂಗ್ ಸೇರಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೆ ಆರ್ ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ ವಿಚಾರವಾಗಿ, ಕಪ್ಪು ಹಣ ಇದ್ದರೆ ಪತ್ತೆಹಚ್ಚಲಿ ಬೇಡ ಅಂತ ನಾವು ಹೇಳಲ್ಲ. ಆದರೆ ನೀವು ರಾಜಕೀಯ ದುರುದ್ದೇಶದಿಂದ ದಾಳಿ ಮಾಡಬಾರದು. ತನಿಖಾ ಸಂಸ್ಥೆಗಳು ಇರೋದೇ ಕಪ್ಪು ಹಣ ತಡೆಗಟ್ಟಲು. ಪರಮೇಶ್ವರ ಪ್ರಕರಣದಲ್ಲಿ ರಾಜಕೀಯ ಪ್ರೇರಿತ ದಾಳಿ ನಡೆಸಲಾಗಿದೆ ಅಂತ ಅನಿಸುತ್ತಿದೆ. ಸುಪ್ರೀಂಕೋರ್ಟ್ ಕೂಡ ಗಮನ ಹರಿಸಿ ನಿಮ್ಮದು ಮಿತಿ ಮೀರುತ್ತಿದೆ ಎಂದಿದೆ. ಅವರ ಅಬ್ಸರ್ವೇಷನ್ ಯಾವ ಕಾರಣಕ್ಕೆ ಮಾಡಿದ್ದಾರೆ ಎಂದು ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ ವಿಚಾರವಾಗಿ ಜಿಲ್ಲೆಯ ಹೆಸರು ಬದಲಾಯಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಆ ಕಾರಣಕ್ಕೆ ನಾವು ರಾಮನಗರ ಜಿಲ್ಲೆಯ ಹೆಸರನ್ನು ಬದಲಾಯಿಸಿದ್ದೇವೆ. ರಾಮನಗರ ಜಿಲ್ಲೆ ಮಾಡಿದಾಗ ಯಾವ ಇತಿಹಾಸ ಇತ್ತು? ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು. ಎಲ್ಲವನ್ನು ಜನಾಭಿಪ್ರಾಯದ ಮೇಲೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿ ಅಂದಿದ್ದಾರೆ. ಜನರು ಹೇಳಿದ್ದಕ್ಕೆ ರಾಮನಗರ ಜಿಲ್ಲೆ ಹೆಸರು ಮರುನಾಮಕರಣ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.