Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಶಾಲಾ ವಾಹನದಿಂದ ಬಿದ್ದು ಮೂವರು ಮಕ್ಕಳಿಗೆ ಗಂಭೀರ ಗಾಯ : ಭಯಾನಕ ವೀಡಿಯೋ ವೈರಲ್ |WATCH VIDEO

08/07/2025 11:29 AM

BREAKING: ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ: ಮೊಹಾಲಿ ವಿಮಾನ ನಿಲ್ದಾಣದಲ್ಲಿ ಭೀತಿ, FIR ದಾಖಲು

08/07/2025 11:26 AM

BREAKING : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ‘ಫ್ರೀ ಟಿಕೆಟ್’ ಕಾರಣ : ‘CID’ ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು!

08/07/2025 11:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ `ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ’ ಆಚರಣೆ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ.!
KARNATAKA

BIG NEWS : ಇಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ `ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ’ ಆಚರಣೆ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ.!

By kannadanewsnow5709/12/2024 5:34 AM

ಬೆಂಗಳೂರು : 2024-25 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಬಾಲಾಸ್ಯ ಕಾರ್ಯಕ್ರಮದಡಿ 17 ನೇ ಸುತ್ತಿನ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 1-19ನೇ ವಯೋಮಾನದ ಎಲ್ಲಾ ಮಕ್ಕಳಿಗೆ ಮಾತ್ರ ವಿತರಿಸಿ ಹಮ್ಮಿಕೊಳ್ಳುವ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

2024-25 ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಮತ್ತು ಪದವಿ ಪೂರ್ವ ಶಿಕ್ಷಣ ಕಾಲೇಜುಗಳಲ್ಲಿ 1-19 ರ ವಯೋಮಾನದ ಎಲ್ಲಾ ಮಕ್ಕಳಿಗೆ ರಾಷ್ಟ್ರೀಯ ಜಂತುಹುಳು ನಿವಾರಣೆಯ ದಿನಾಚರಣೆಯನ್ನು (National De-worming Day – NDD) ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯಕ್ರಮವಾಗಿ ಡಿಸೆಂಬರ್-2024ರ ಮಾಹೆಯಲ್ಲಿ ದಿನಾಂಕ : 09.12.2024 ರಂದು ಮತ್ತು ಸದರಿ ದಿನದಂದು ಹಾಜರಾಗದೇ ಇರುವ ಮಕ್ಕಳಿಗೆ ದಿನಾಂಕ :16.12.2024 ರಂದು ಮಾಪ್ ಅಪ್ ದಿನವನ್ನಾಗಿ ( Mop up Day ) ಆಯೋಜಿಸಲು ಉಲ್ಲೇಖಿತ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಸಂಬಂಧ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಜಂತುಹುಳು ನಿವಾರಣಾ ದಿನವನ್ನು ಹಮ್ಮಿಕೊಂಡು ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ಕೆಳಕಂಡ ಕ್ರಮಗಳನ್ನು ನಿರ್ವಹಿಸಲು ಸೂಚಿಸಿದೆ.

ಪೂರ್ವ ಸಿದ್ಧತಾ ಕ್ರಮಗಳು:-

1. ರಾಷ್ಟ್ರೀಯ ಜಂತುಹುಳು ನಿವಾರಣೆಯ ದಿನಾಚರಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರತಿ ಶಾಲೆಯಲ್ಲಿಯೂ SDMC / ಶಾಲಾ ಆಡಳಿತ ಮಂಡಳಿ ಸಭೆಯನ್ನು ಕರೆದು ಮಕ್ಕಳನ್ನು ಆಚರಣೆಯ ದಿನದಂದು ತಪ್ಪದೇ ಶಾಲೆಗೆ ಹಾಜರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಕ್ಕಳ ಪೋಷಕರಿಗೆ ಮಾಹಿತಿ ನೀಡಿ ಕಾರ್ಯಕ್ರಮದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡುವುದು.

2. ಶಾಲೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯು ತಲುಪಿಸುವ ಮಾತ್ರೆಗಳನ್ನು ತರಗತಿವಾರು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸ್ವೀಕರಿಸಿ ಲೆಕ್ಕ ವಿವರದೊಂದಿಗೆ ಸುರಕ್ಷಿತವಾಗಿ ನಿರ್ವಹಿಸಬೇಕು.

3. ದಿನಾಂಕ: 09.12.2024 ರಂದು ವಿದ್ಯಾರ್ಥಿಯು ಗೈರು ಹಾಜರಾದಲ್ಲಿ ದಿನಾಂಕ: 16.12.2024 ರಂದು ಮಾಪ್ ಅಪ್ ದಿನವನ್ನಾಗಿ ಕಡ್ಡಾಯವಾಗಿ ಏರ್ಪಡಿಸಿ ಹಿಂದೆ ಗೈರುಹಾಜರಾದ ಮಕ್ಕಳಿಗೆ ಮಾತ್ರೆಯ ವಿತರಣೆಯ ಕಾರ್ಯಕ್ರಮವನ್ನು ಆಯೋಜಿಸುವುದು.

ಜಂತು ಹುಳು ನಿವಾರಣಾ ಮಾತ್ರಗಳನ್ನು ಬಳಸುವ ಕ್ರಮ:-

1. ಸದರಿ ದಿನಾಚರಣೆಯಂದು ಮಧ್ಯಾಹ್ನ ಉಪಾಹಾರ ನೀಡಿದ / ಸ್ವೀಕರಿಸಿದ ನಂತರ ಅರ್ಧ ಗಂಟೆ ಸಮಯ ಕಳೆದ ಕೂಡಲೇ ಎಲ್ಲಾ ಶಾಲಾ ಮಕ್ಕಳನ್ನು ತರಗತಿವಾರು ಸಾಲಾಗಿ ಕುಳ್ಳಿರಿಸಿ ಆಯಾ ತರಗತಿಯ ಶಿಕ್ಷಕರ ಸಮಕ್ಷಮದಲ್ಲಿ ಮತ್ತು ಮಾರ್ಗದರ್ಶನದಲ್ಲಿ ಪ್ರತಿಯೊಬ್ಬ ಮಗುವಿಗೆ ತಲಾ ಒಬ್ಬರಿಗೆ ಒಂದು ಮಾತ್ರೆಯಂತೆ ಮಾತ್ರೆ ವಿತರಿಸಿ, ಸ್ವೀಕರಿಸುವಂತೆ ಮಾಡುವುದು.

2. ಪ್ರತಿ ವಿದ್ಯಾರ್ಥಿಯು ಮಾತ್ರೆಯನ್ನು ಚೀಪುವಂತೆ, ಕಡಿದು ಸರಿಯಾಗಿ ಜಗಿದು ನೀರು ಕುಡಿಯುತ್ತಾ, ಸೇವಿಸುವಂತೆ ಸೂಚಿಸುವುದು. ಪ್ರತಿಯೊಬ್ಬ ಶಿಕ್ಷಕರು ಸಹ ಒಂದು ಮಾತ್ರೆಯನ್ನು ಮಕ್ಕಳ ಎದುರಿಗೆ ತಾವು ಸ್ವತಃ ಸ್ವೀಕರಿಸುತ್ತಾ, ಜಗಿದು ನೀರಿನೊಂದಿಗೆ ಸ್ವೀಕರಿಸುವುದನ್ನು ಪ್ರದರ್ಶಿಸಿ, ಸೂಕ್ತ ಮಾರ್ಗದರ್ಶನ ನೀಡಿ ವಿತರಣೆಯ ಕಾರ್ಯಕ್ರಮವನ್ನು ಕೈಗೊಳ್ಳುವುದು.

3. ಮಾತ್ರೆ ನುಂಗಿದ ನಂತರ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಾಗ ಆಶಾ ಕಾರ್ಯಕರ್ತೆಯರು, ಆರ್.ಬಿ.ಎಸ್. ಕೆ. ಪ್ರತಿ ನಿಧಿಗಳು / ತಂಡದ ತಜ್ಞ ವೈದ್ಯರು ಅಥವಾ ಹತ್ತಿರದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು (THO), ಆರೋಗ್ಯ ಶಿಕ್ಷಣ ಅಧಿಕಾರಿಗಳನ್ನು (HEO) ತಕ್ಷಣ ಸಂಪರ್ಕಿಸಿ ಅಗತ್ಯ ತುರ್ತು ಚಿಕಿತ್ಸೆಯನ್ನು ಒದಗಿಸಲು ಕ್ರಮವಹಿಸುವುದು.

4. ಮಾಪ್ ಅಪ್ ದಿನದ ನಂತರವೂ ಜಂತು ಹುಳು ನಿವಾರಣಾ ಮಾತ್ರೆಗಳು ಶಾಲಾ ಕಾಲೇಜುಗಳಲ್ಲಿ ಉಳಿಕೆ ಆದಲ್ಲಿ ಮಾತ್ರೆಗಳನ್ನು ಆರ್.ಬಿ.ಎಸ್.ಕೆ. ಪ್ರತಿನಿಧಿಗಳು ಅಥವಾ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತಪ್ಪದೇ ಹಿಂದಿರುಗಿಸುವುದು.

5. ಶಿಕ್ಷಕರು ಯಾವುದೇ ಕಾರಣಕ್ಕೂ ಮಗುವಿಗೆ ಒಂದಕ್ಕಿಂತ ಹೆಚ್ಚು ಮಾತ್ರೆಗಳನ್ನು ನೀಡಬಾರದು ಹಾಗೂ ಮನೆಗೆ ತೆಗೆದುಕೊಂಡು ಹೋಗದಂತೆ ಅವಕಾಶ ನೀಡಬಾರದು.

6. ಮಾತ್ರೆಗಳನ್ನು ಅನಾರೋಗ್ಯ ಇರುವಂತಹ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ವಿತರಿಸಬಾರದು.

ಮೇಲ್ವಿಚಾರಣಾ ಕ್ರಮ;-

1. ಶಾಲಾ ಹಂತದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಜಂತು ಹುಳು ನಿವಾರಣಾ ಮಾತ್ರೆಯಾಗಿ, Albendazole (400 mg) ಮಾತ್ರೆಯನ್ನು ನೀಡಿ ಚೀಪುವಂತೆ ಹಾಗೂ ವಿತರಣೆ ಮಾಡಿದ ಬಗ್ಗೆ, ಫಲಾನುಭವಿ ಮಗುವಿನ ಸೂಕ್ತ ದಾಖಲೆಯನ್ನು ನಿಗದಿತ ನಮೂನೆಗಳ ಮೂಲಕ ಆರೋಗ್ಯ ಇಲಾಖೆಗೆ ನೀಡಲು ತರಗತಿಗಳ ಶಿಕ್ಷಕರಿಗೆ ಕಡ್ಡಾಯವಾಗಿ ಸೂಚಿಸುವುದು.

2. ಕಾರ್ಯಕ್ರಮದ ಸಮಗ್ರ ಮೇಲ್ವಿಚಾರಣೆಗಾಗಿ ಕ್ಲಸ್ಟರ್ ಹಂತದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ (CRP) ಮತ್ತು ಬ್ಲಾಕ್ ಹಂತದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ (BRC), ತಾಲ್ಲೂಕು ಹಂತದ ದೈಹಿಕ-ಆರೋಗ್ಯ ಶಿಕ್ಷಣ ಶಿಕ್ಷಣಾಧಿಕಾರಿಯನ್ನು ಇವರನ್ನು ತಾಲ್ಲೂಕು ಹಂತದಲ್ಲಿ ಪ್ರತಿ ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಹಂತದಲ್ಲಿ ಒಬ್ಬ ಪಿ.ಯು. ಕಾಲೇಜಿನ ಪ್ರಾಂಶುಪಾಲರನ್ನು ಆಯ್ತು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇವರನ್ನು ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲು ಕ್ರಮವಹಿಸಿ ನೇಮಿಸಿ, ನೀಯೋಜಿಸಿ ಸೂಕ್ತ ಮೇಲ್ವಿಚಾರಣೆಗೆ ಏರ್ಪಾಡು ಮಾಡಿಕೊಳ್ಳುವುದು. ಇವರಿಗೆ ಕಾರ್ಯಕ್ರಮದ ಅನುಷ್ಠಾನದ ನಿರ್ವಹಣೆ ಮತ್ತು ಮೇಲ್ವಿಚಾರಣೆಯ ಬಗ್ಗೆ, ಸೂಕ್ತ ತರಬೇತಿ ಮತ್ತು ಪೂರ್ವಸಿದ್ಧತೆಯ ಬಗ್ಗೆ ಅಗತ್ಯ ಮಾಹಿತಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ನೆರವಿನಿಂದ ನೀಡುವುದು.

3. ಜಿಲ್ಲಾ ಹಂತದಲ್ಲಿ ಶಿಕ್ಷಣಾಧಿಕಾರಿಗಳು ಪಿ.ಎಂ.ಪೋಷಣ್ ಮತ್ತು ತಾಲ್ಲೂಕು ಹಂತದಲ್ಲಿ ಸಹಾಯಕ ನಿರ್ದೇಶಕರು ಪಿ.ಎಂ. ಪೋಷಣ್ ಇವರು ಮೇಲ್ವಿಚಾರಣೆ ಕ್ರಮವಹಿಸಿ ಅಗತ್ಯ ಸಹಕಾರ ನೀಡುವುದು. ಆರೋಗ್ಯ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾರ್ಯಕ್ರಮದ ಆಚರಣೆ ಮತ್ತು ವಿತರಣೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡುವುದು.

4. ಜಿಲ್ಲಾ ಹಂತದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ), ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು, ಡಯಟ್ ಸಂಸ್ಥೆಯಪ್ರಾಂಶುಪಾಲರು ಹಾಗೂ ಪದನಿಮಿತ್ತ ಉಪನಿರ್ದೇಶಕರು (ಅಭಿವೃದ್ಧಿ) ಮತ್ತು ತಾಲ್ಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮದ ಸಮಗ್ರ ಮೇಲ್ವಿಚಾರಣೆ ನಿರ್ವಹಿಸುವುದು ಹಾಗೂ ಅಗತ್ಯ ಸಹಕಾರ ನೀಡುವುದು.

5. ದಿನಾಂಕ 09.12.2024 ರಂದು ಮತ್ತು ದಿನಾಂಕ 16.12.2024 ರಂದು ನಿರ್ವಹಣೆಯಲ್ಲಿ ಏನಾದರೂ ಅಡಚಣೆ, ಸಂದೇಹಗಳಿದ್ದಲ್ಲಿ ಮಾತ್ರೆಗಳ ವಿತರಣೆಯಲ್ಲಿ ಕೊರತೆಯಾದಲ್ಲಿ ಮತ್ತು ವಿತರಣೆಯ ಪರಿಪೂರ್ಣತೆಯ ಬಗ್ಗೆ, ಆಯಾ ವಲಯದ / ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳು ಸೂಕ್ತ ಮೇಲ್ವಿಚಾರಣೆ ನಡೆಸಿ ತಾಲ್ಲೂಕು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಂಡು ಅಗತ್ಯ ಕ್ರಮವಹಿಸುವುದು.

 

BIG NEWS : ಇಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ `ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ’ ಆಚರಣೆ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ.! BIG NEWS: National Deworming Day to be observed in all schools in the state today: Education Department
Share. Facebook Twitter LinkedIn WhatsApp Email

Related Posts

BREAKING : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ‘ಫ್ರೀ ಟಿಕೆಟ್’ ಕಾರಣ : ‘CID’ ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು!

08/07/2025 11:24 AM2 Mins Read

ALERT : ರಾಜ್ಯದಲ್ಲಿ ಹೆಚ್ಚುತ್ತಿದೆ ‘ಡಿಜಿಟಲ್ ಅರೆಸ್ಟ್’ ಕೇಸ್ : ವೃದ್ಧ ಮಹಿಳೆಗೆ ಬರೋಬ್ಬರಿ 3.17 ಕೋಟಿ ರೂ. ವಂಚನೆ.!

08/07/2025 11:18 AM2 Mins Read

ALERT : ` ಬ್ರೈನ್ ಸ್ಟ್ರೋಕ್’ ಸಂಭವಿಸುವ ಮೊದಲು ದೇಹವು ಈ 5 ಸಂಕೇತಗಳನ್ನು ನೀಡುತ್ತದೆ.!

08/07/2025 11:03 AM2 Mins Read
Recent News

SHOCKING : ಶಾಲಾ ವಾಹನದಿಂದ ಬಿದ್ದು ಮೂವರು ಮಕ್ಕಳಿಗೆ ಗಂಭೀರ ಗಾಯ : ಭಯಾನಕ ವೀಡಿಯೋ ವೈರಲ್ |WATCH VIDEO

08/07/2025 11:29 AM

BREAKING: ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ: ಮೊಹಾಲಿ ವಿಮಾನ ನಿಲ್ದಾಣದಲ್ಲಿ ಭೀತಿ, FIR ದಾಖಲು

08/07/2025 11:26 AM

BREAKING : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ‘ಫ್ರೀ ಟಿಕೆಟ್’ ಕಾರಣ : ‘CID’ ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು!

08/07/2025 11:24 AM

BIG NEWS : `UPI’ ಬಳಕೆದಾರರಿಗೆ ಗುಡ್ ನ್ಯೂಸ್ : ಸ್ಮಾರ್ಟ್ ವಾಚ್, ಟಿವಿ, ಕಾರುಗಳಲ್ಲಿ ಅಪ್ಲಿಕೇಶನ್ ತೆರೆಯದೆಯೇ ಪಾವತಿಸಬಹುದು.!

08/07/2025 11:23 AM
State News
KARNATAKA

BREAKING : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ‘ಫ್ರೀ ಟಿಕೆಟ್’ ಕಾರಣ : ‘CID’ ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು!

By kannadanewsnow0508/07/2025 11:24 AM KARNATAKA 2 Mins Read

ಬೆಂಗಳೂರು : 18ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಜೂನ್ 4ರಂದು ಬೆಂಗಳೂರಿನ…

ALERT : ರಾಜ್ಯದಲ್ಲಿ ಹೆಚ್ಚುತ್ತಿದೆ ‘ಡಿಜಿಟಲ್ ಅರೆಸ್ಟ್’ ಕೇಸ್ : ವೃದ್ಧ ಮಹಿಳೆಗೆ ಬರೋಬ್ಬರಿ 3.17 ಕೋಟಿ ರೂ. ವಂಚನೆ.!

08/07/2025 11:18 AM

ALERT : ` ಬ್ರೈನ್ ಸ್ಟ್ರೋಕ್’ ಸಂಭವಿಸುವ ಮೊದಲು ದೇಹವು ಈ 5 ಸಂಕೇತಗಳನ್ನು ನೀಡುತ್ತದೆ.!

08/07/2025 11:03 AM

BREAKING : ಬೆಳಗಾವಿಯಲ್ಲಿ ಸುಪಾರಿ ನೀಡಿ ವಕೀಲ ಸಂತೋಷ್ ಕಿಡ್ನಾಪ್ & ಹತ್ಯೆ ಕೇಸ್ : 8 ಆರೋಪಿಗಳು ಅರೆಸ್ಟ್!

08/07/2025 10:51 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.