ಬೆಂಗಳೂರು : ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಇದೀಗ ಮೆಟ್ರೋ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಡಿಸುತ್ತಿದ್ದು, ದರ ಏರಿಕೆ ಬೆನ್ನಲ್ಲೆ ಇದೀಗ ಮೆಟ್ರೋ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಮೆಟ್ರೋನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಶೇ. 35 ರಿಂದ 40 ರಷ್ಟು ಇಳಿಕೆಯಾಗಿದೆ ಎಂದು ತಿಳಿದು ಬಂದಿದೆ. ಎಂದು ತಿಳಿದುಬಂದಿದೆ.
ಹೌದು 2017ರ ಜೂನ್ ಬಳಿಕ ಇದೇ ಮೊದಲ ಸಲ ಪ್ರಯಾಣ ದರ ಏರಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮವು ರಿಯಾಯಿತಿ ರಹಿತ ದರದಲ್ಲಿ ಸರಾಸರಿ ಶೇ 51.55ರಷ್ಟು ಹಾಗೂ ರಿಯಾಯಿತಿ ಸಹಿತ ದರದಲ್ಲಿ ಶೇ 45-46 ರಷ್ಟು ಏರಿಕೆ ಮಾಡಿರುವುದಾಗಿ ತಿಳಿಸಿದೆ.
ಒಂದು ಬಾರಿಯ ಪ್ರಯಾಣಕ್ಕೆ ಬೇಕಾಗುವ ಗರಿಷ್ಠ ದರದಷ್ಟು ಮೊತ್ತ ಕಾರ್ಡ್‌ನಲ್ಲಿ ಇರಬೇಕು ಎಂದು ನಿಗಮದ ಅಧಕಾರಿಗಳು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಯಾಣಿಕರೊಬ್ಬರು, ಈ ಹಿಂದೆ ಗರಿಷ್ಠ ಮೊತ್ತ 60 ಇದ್ದಾಗ ಕಾರ್ಡ್‌ನ ಉಳಿತಾಯ ಮಿತಿ 50 ಇದ್ದದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಪರಿಷ್ಕೃತ ದರ ಪಟ್ಟಿ ಫೆಬ್ರುವರಿ 9ರಿಂದ ಜಾರಿಗೆ ಬಂದಿದೆ. ನಂತರದ ಸತತ ಎರಡು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ.ಫೆಬ್ರುವರಿ 10ರಂದು ಒಟ್ಟು 8,28,149 ಜನರು ಹಾಗೂ ನಿನ್ನೆ 7,78,774 ಮಂದಿ ಮೆಟ್ರೊ ಪ್ರಯಾಣ ಮಾಡಿದ್ದಾರೆ.ಜನವರಿ 13ರ ಮಕರ ಸಂಕ್ರಾಂತಿ ರಜಾದಿನವನ್ನು ಹೊರತುಪಡಿಸಿ, ಈ ವರ್ಷದ ಉಳಿದ ನಾಲ್ಕು ಸೋಮವಾರಗಳಿಗೆ ಹೋಲಿಸಿದರೆ, ಫೆಬ್ರುವರಿ 10ರಂದು ಪ್ರಯಾಣಿಸಿದವರ ಸಂಖ್ಯೆ ಶೇ 6ರಷ್ಟು ಕಡಿಮೆಯಾಗಿದೆ.ನಮ್ಮ ಮೆಟ್ರೋದಲ್ಲಿ ಶೇ.35 ರಿಂದ 40 ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಪ್ರತಿದಿನ ಮೆಟ್ರೋದಲ್ಲಿ 8 ರಿಂದ 9 ಲಕ್ಷ ಜನ ಪ್ರಯಾಣ ಮಾಡುತ್ತಿದ್ದರು.ಆದರೆ ಇದೀಗ ಶೇಕಡ 30 ರಿಂದ 40 ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದ್ದು ಪ್ರಯಾಣಿಕರು ಆಟೋ ಓಲಾ ಕ್ಯಾಬ್ ಗಳ ಮೊರೆ ಹೋಗಿದ್ದಾರೆ.