ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯನ ನಡುವೆ ಕುರ್ಚಿಗಾಗಿ ಫೈಟ್ ನಡೆಯುತ್ತಿದ್ದು, ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ನಾಗ ಸಾಧುಗಳು ಆಶೀರ್ವಾದ ಮಾಡಿದ್ದಾರೆ. ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ನಾಗ ಸಾಧುಗಳು ಡಿಕೆ ಶಿವಕುಮಾರ್ ಗೆ ಆಶೀರ್ವಾದ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಮೇಲೆ ನಮ್ಮ ಸದ್ಗುರುಗಳ ಆಶೀರ್ವಾದ ಇದೆ.ಡಿಕೆ ಶಿವಕುಮಾರ್ ಅವರು ಸಿಎಂ ಆಗಲೆಂದು ಆಶೀರ್ವಾದ ಮಾಡಿದ್ದೇನೇ. ಸಿಎಂ ಆಗುವಂತೆ ನಾನು ಡಿಕೆ ಶಿವಕುಮಾರ್ ಅವರಿಗೆ ಆಶೀರ್ವಾದ ಮಾಡಿದ್ದೇನೆ. ಅವರು ಉನ್ನತ ಮಟ್ಟಕ್ಕೆ ಬರುತ್ತಾರೆ ಅಭಿವೃದ್ಧಿ ಆಗುತ್ತಾ ಇರುತ್ತದೆ ಬೀದಿಗೆರೆ ನಾಗಬಾಬ ಆಶೀರ್ವಾದ ಮಾಡಿದ್ದಾರೆ. ನನ್ನ ಕೆಲಸ ಆಶೀರ್ವಾದ ಮಾಡೋದು ಹಾಗಾಗಿ ಬಂದಿದ್ದೇನೆ ಡಿಕೆ ಶಿವಕುಮಾರ್ ಚೆನ್ನಾಗಿರಲಿ. ಆಶೀರ್ವಾದ ದೇವರು ಹಾಗೂ ಸಂತರು ಮಾಡುತ್ತಾರೆ ಇನ್ನೇನಿದೆ ಎಂದು ತಿಳಿಸಿದರು.








