ಮೈಸೂರು : ಆಟವಾಡುತ್ತಿದ್ದ ಮಗು ಕರೆದಾಗ ಬರಲಿಲ್ಲವೆಂಬ ತನ್ನ ಮಾತನ್ನು ಕೇಳಲಿಲ್ಲ ಎಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಣಸೂರು ತಾಲೂಕು ಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ. ದೊಣ್ಣೆಯಿಂದ ಹೊಡೆದು ಮಗುವಿನ ಎರಡು ಕೈಗಳನ್ನ ಚಿಕ್ಕಪ್ಪ ಮುರಿದಿದ್ದಾರೆ.
ಆನಂದ್ (23) ಎನ್ನುವ ವ್ಯಕ್ತಿ ತನ್ನ ಹೆಂಡತಿಯ ಅಕ್ಕನ ಮಗಳ ಮೇಲೆ ಹಲ್ಲೆ ಮಾಡಿ ಕೈ ಮುರಿದಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಲ್ಲೆಗೆ ಒಳಗಾದ ಬಾಲಕಿ ಜಾನ್ವಿ (4) ಎಂದು ತಿಳಿದುಬಂದಿದೆ. ಆಟೋ ಓಡಿಸುತ್ತಿದ್ದ ಆನಂದ್ ನಿನ್ನೆ ಶನಿವಾರ ರಜೆ ಇದ್ದ ಕಾರಣ ಮನೆಯಲ್ಲಿ ಆಟವಾಡುತ್ತಿದ್ದ ಜಾನ್ವಿಯನ್ನ ಕರೆದಿದ್ದಾನೆ.
ಆರೋಪಿ ಆನಂದನ ಪತ್ನಿಯ ಅಕ್ಕನ ಮಗಳು ತನ್ನ ಮಾತು ಕೇಳಲಿಲ್ಲವೆಂದು ಕೋಪಗೊಂಡು ಆನಂದ್ ರಿಪೀಸ್ ಪಟ್ಟಿ, ಸ್ಕ್ರೂಡ್ರೈವರ್ ನಿಂದ ಮಗುವಿನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಬಾಲಕಿಯ ಎರಡೂ ಕೈಗಳ ಮೂಳೆ ಮುರಿದಿದೆ. ತಲೆಗೂ ಪೆಟ್ಟಾಗಿ ದ್ದು, ಆಘಾತಕ್ಕೊಳಗಾಗಿರುವ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.