ಹಾಸನ : ಲೋಕಸಭೆ ಚುನಾವಣೆಯ ವೇಳೆ ಮತಗಳ್ಳತನ ಆಗಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ, ದೇಶದಲ್ಲಿ ಮತಗಳ್ಳತನ ಆಗಿರುವುದು ನಿಜ. ಈ ಸಂಬಂಧ ವಿಧಾನಸಭೆ ಯಲ್ಲೂ ಚರ್ಚೆ ಆಗಿದೆ. ವ್ಯವಸ್ಥಿತವಾಗಿ ಒಂದು ಸಮುದಾಯದ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 2021ರ ಚುನಾವಣೆ ವೇಳೆ ಮತಪಟ್ಟಿಯಿಂದ ನನ್ನ ಹೆಸರನ್ನೇ ಕೈಬಿಡಲಾಗಿತ್ತು. ಮುಖ್ಯ ಚುನಾವಣಾಧಿಕಾರಿ ಯೊಂದಿಗೆ ಮಾತನಾಡಿದ ನಂತರ ನನ್ನ ಹೆಸರನ್ನು ಸೇರಿಸಲಾಯಿತು. ಚುನಾವಣಾ ಆಯೋಗ ಹೀಗೆ ಕೆಲಸ ಮಾಡಿದರೆ ಹೇಗೆ? ಬಿಜೆಪಿ ಏಜೆಂಟಂತೆ ವರ್ತಿಸುತ್ತಿರುವುದು ಸರಿಯಲ್ಲ ಎಂದು ದೂರಿದರು. ಧರ್ಮಸ್ಥಳದ ಉತ್ಪನನ ವಿಚಾರವಾಗಿ ಡಿಸಿಎಂ ಶಿವಕುಮಾರ್ ಅವರು ನೀಡಿರುವ ಹೇಳಿಕೆ ಕುರಿತು ನನಗೆ ಗೊತ್ತಿಲ್ಲ ಎಂದರು.