ಬೆಂಗಳೂರು : ಹೈಕಮಾಂಡ್ ನಾಯಕರು ಕರೆದರೆ ದೆಹಲಿಗೆ ಹೋಗುತ್ತೇನ ಎಂದು ಬೆಂಗಳೂರು ಅರಮನೆ ಮೈದಾನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ದೆಹಲಿ ಕಾಂಗ್ರೆಸ್ ಕಚೇರಿ ನಮಗೆ ದೇವಾಲಯ ಇದ್ದ ಹಾಗೆ ನವದೆಹಲಿಯಲ್ಲಿ ನನಗೆ ಬಹಳ ಮುಖ್ಯವಾದ ಕೆಲಸಗಳು ಇವೆ. ಇನ್ನು ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿಗೆ ವಿಚಾರಕ್ಕೆ ಸಂಬಂಧಪಟ್ಟಂತೆ ಮೆಕ್ಕೆಜೋಳಕ್ಕೆ ಬೆಂಬಲ ವಿಚಾರ ಸಂಬಂಧ ಭೇಟಿಯಾಗುತ್ತೇನೆ ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚೆ ಮಾಡಲು ಹೋಗುತ್ತೇವೆ ಎಂದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ನನಗೆ ಯಾವುದೇ ಸಮುದಾಯದ ವ್ಯಾಖ್ಯಾನ ಬೇಕಿಲ್ಲ. ನನ್ನ ಸಮುದಾಯ ಕಾಂಗ್ರೆಸ್ ಕಾಂಗ್ರೆಸ್ಸೇ ನನ್ನ ಸಮುದಾಯ ಎಂದು ನಿರ್ಮಲಾನಂದನಾಥ ಶ್ರೀ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದರು.
ಒಂದು ಸಮುದಾಯ ನನ್ನ ಪರ ಇರುವುದು ಅದು ಬೇರೆ ವಿಚಾರ, ನಾನು ಎಲ್ಲ ಸಮುದಾಯಗಳನ್ನು ಇಷ್ಟಪಡುತ್ತೇನೆ ಗೌರವಿಸುತ್ತೇನೆ. ನಾನು ಎಲ್ಲಾ ಸಮುದಾಯವನ್ನು ಪ್ರೀತಿಸುತ್ತೇನೆ ಓಬಿಸಿ ಎಸ್ಸಿ ಎಸ್ಟಿ ಮತ್ತು ಅಲ್ಪಸಂಖ್ಯಾತರು ನನ್ನ ಜೊತೆಗೆ ಇದ್ದಾರೆ ಹೌದು ನಾನು ಒಕ್ಕಲಿಗ ಸಮುದಾಯದವನು ಕಾಂಗ್ರೆಸ್ ನಲ್ಲಿ ಎಲ್ಲಾ ಸಮುದಾಯದವರು ಇದ್ದಾರೆ ಎಂದು ತಿಳಿಸಿದರು.








