ಬೆಂಗಳೂರು: ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಲಿಂಗಾಯತ ಮಠಾಧೀಶ ಶಿವಮೂರ್ತಿ ಮುರುಘಾ ಶರಣರು ವಿರುದ್ಧ ಕರ್ನಾಟಕ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನೋಟಿಸ್ ನೀಡಲಾಗಿದೆ.
ಶಿವಮೂರ್ತಿ ಮುರುಘಾ ಶರಣರು ಕರ್ನಾಟಕದ ಚಿತ್ರದುರ್ಗದ ಪ್ರಮುಖ ಲಿಂಗಾಯತ ಮಠದ ಮುಖ್ಯ ಪೀಠಾಧಿಪತಿಯಾಗಿದ್ದಾರೆ. ಇಬ್ಬರು ಅಪ್ರಾಪ್ತರ ಪರವಾಗಿ ದೂರು ದಾಖಲಾದ ನಂತರ ಮೈಸೂರು ನಗರ ಪೊಲೀಸರು ಶಿವಮೂರ್ತಿ ಮುರುಘಾ ಶರಣರು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಠದಿಂದ ನಡೆಸಲ್ಪಡುವ ಶಾಲೆಯಲ್ಲಿ ಕಲಿಯುತ್ತಿರುವ 15 ಮತ್ತು 16 ವರ್ಷದ ಇಬ್ಬರು ಬಾಲಕಿಯರು ಮೂರೂವರೆ ವರ್ಷಗಳಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೋಸ್ಕೋ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗದ ಮುರುಘ ಮಠದ ಶಿವಮೂರ್ತಿಗಳ ವಿರುದ್ದ ಲುಕ್ ಔಟ್ ನೋಟಿಸ್ ಜಾರಿ ಜಾರಿ ಮಾಡಲಾಗಿದೆ.
ವಿರುದ್ದ ಲುಕ್ ಔಟ್ ನೋಟಿಸ್ ಅನ್ನು ಡಿವೈಎಸ್ಪಿ ಅನಿಲ್ ಅವರು ಹೊರಡಿಸಿದ್ದು, ಇದಕ್ಕೆ ಕಾರಣ ಅವರು ಇದೇ ಆಗಸ್ಟ್ 29ರಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎನ್ನಲಾಗಿದೆ.
ಲುಕ್ ಔಟ್ ನೋಟಿಸ್ ಅಂದ್ರೆ ಏನು? ತಲೆಮರೆಸಿಕೊಂಡಿರುವ ಅಥವಾ ಕಾನೂನು ಜಾರಿ ಏಜೆನ್ಸಿಗಳಿಂದ ಬೇಕಾಗಿರುವ ವ್ಯಕ್ತಿಯು ದೇಶವನ್ನು ತೊರೆಯಲು ಸಾಧ್ಯವಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಲುಕ್ ಔಟ್ ನೋಟಿಸ್ ಅಥವಾ ಸುತ್ತೋಲೆ (ಎಲ್ಒಸಿ) ಹೊರಡಿಸಲಾಗುತ್ತದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಂತಹ ಎಲ್ಲಾ ವಲಸೆ ತಪಾಸಣಾ ಕೇಂದ್ರಗಳಿಗೆ ಮಠಾಧೀಶರ ವಿರುದ್ಧ ನೋಟಿಸ್ ನೀಡಲಾಗಿದೆ